ಬೆಂಗಳೂರು : ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ ಆದರೆ ಉತ್ತರಾಖಂಡ್, ಗೋವಾದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಬಹಳ ನಿರೀಕ್ಷೆ ಇತ್ತು, ನೋಡೋಣ ಇನ್ನೂ ಪೂರ್ಣಾವಾಗಿ ಫಲಿತಾಂಶ ಬಂದಿಲ್ಲ, ಇನ್ನೂ ಬರುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಪಂಚರಾಜ್ಯ ಚುನಾವಣೆಯ ಫಲಿತಾಂಶದ ವಿಚಾರಕ್ಕೆ ನಗರದಲ್ಲಿಂದು ಮಾತನಾಡಿದ ಅವರು ಪಂಜಾಬ್ನಲ್ಲಿ ಮಾತ್ರ ನಾವು ಅಧಿಕಾರದಲ್ಲಿದ್ದೆವು. ಆದರೆ ಇದೀಗ ಅಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದಿದೆ. ನಮ್ಮ ತಪ್ಪಿನಿಂದ ಪಂಜಾಬ್ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಪಂಜಾಬ್ನಲ್ಲೇನು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿಲ್ಲ.
ಇನ್ನು ಈ ಚುನಾವಣೆಗಳಿಂದ ನಾನೇನು ಬಹಳ ಏನ್ ನಿರೀಕ್ಷೆ ಇರಲಿಲ್ಲ, ಆದ್ರೆ ಗೋವಾ, ಉತ್ತರಾಖಂಡ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂಬ ಅಂದಾಜು ಇತ್ತು. ಈ ಚುನಾವಣೆಯಿಂದ ನಮ್ಮ ನಾಯಕರುಗಳು ಧೈರ್ಯ ಕಳೆದುವಂಥದ್ದೇನಿಲ್ಲ. ಪಂಜಾಬ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದಾರಾ..? ಅಧಿಕಾರ ಇರೋ ರಾಜ್ಯಗಳಲ್ಲೇ ಗೆದ್ದಿದ್ದಾರೆ ಅಷ್ಟೆ ಹೊರತು ಇದರಿಂದ ಬಹಳ ಜಂಬ ಪಡೋ ಅವಶ್ಯಕತೆ ಇಲ್ಲವೆಂದು ಚುನಾವಣೆಯ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.