ಬೆಂಗಳೂರು : ಸಿಎಂ ಬಸವರಾಜ ಬೊಮ್ಮಯಿ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಜೋರಾಗಿತ್ತು. ಈ ವೇಳೆ ಚರ್ಚೆಯ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಡಬಲ್ ಇಂಜಿನ್ ಸರ್ಕಾರಕ್ಕೆ ಡಬ್ಬಾ ಸರ್ಕಾರ ಎಂದು ಜರಿಯುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸದನದಲ್ಲಿ ಗುಡುಗಿದರು.
ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಇದ್ದ ಸಾಲಕ್ಕಿಂತ ಇದೀಗ ದುಪ್ಪಟ್ಟು ಸಾಲ ಏರಿದೆ. ಏಳು ವರ್ಷಕ್ಕೆ 100 ಲಕ್ಷ ಕೋಟಿ ಸಾಲವಾಗಿದೆ. ಅದೇ ರೀತಿ ರಾಜ್ಯದಲ್ಲೂ ಸಾಲ ದುಪ್ಪಟ್ಟಾಗಿದೆ ಎಂದು ವೈಫಲ್ಯದ ಬಗ್ಗೆ ಟೀಕಿಸಿದರು.
ಇನ್ನು, ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಜಿಎಸ್ಟಿ ತೆರಿಗೆ ಪರಿಹಾರ ವಾಪಸ್ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ್ರು.. ರಾಜ್ಯದಿಂದ 25 ಸಂಸದರು ಇದ್ದಾರೆ. ಜಿಎಸ್‌ಟಿ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ
ಸಿದ್ದರಾಮಯ್ಯ ಸಲಹೆ ಕೊಟ್ರು. ಸಿದ್ದರಾಮಯ್ಯ ಟೀಕೆಗೆ ಕಲಾಪದಲ್ಲಿ ಸ್ಪಷ್ಟನೆ ನೀಡಿದ್ರು ಸಿಎಂ ಬೊಮ್ಮಾಯಿ.
ಬಜೆಟ್ ಮೇಲಿನ ಚರ್ಚೆಯಲ್ಲಿ ಮುಂದಿನ ಚುನಾವಣೆ ವಿಚಾರದ ಬಿಸಿಬಿಸಿ ಚರ್ಚೆ ನಡೆಯಿತು.. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಚರ್ಚೆಗೆ ಎತ್ತಿಕೊಂಡ ಎರಡೂ ಪಕ್ಷದ ನಾಯಕರು ಪರಸ್ಪರ ಕಾಳೆಲೆದುಕೊಂಡ್ರು. ನೀವು ಏನೆಲ್ಲಾ ಅಭಿವೃದ್ಧಿ ಮಾಡಿದ್ದೀರಾ..? ಎಷ್ಟು ಭರವಸೆ ಈಡೇರಿಸಿದ್ದೀರಾ ತನ್ನಿ ಅಂತ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲೆಸೆದರು.
ಈ ವೇಳೆ ಮೇಲೆದ್ದ ಈಶ್ವರಪ್ಪ ನಿಮ್ಮಕಾಲದಲ್ಲಿ ಹೇಳಿದ್ದಷ್ಟೇ, ನೀವೂ ಕೂಡ ಏನೂ ಮಾಡಿಲ್ಲ ಎಂದು
ಕೂಗಾಡಿದ್ರು.. ಮುಂದೆ ಚುನಾವಣೆ ಬಂದ್ರೆ ನಿಮಗೆ ಮಾರಿಹಬ್ಬ ಕಾದಿದೆ ಎಂದು ಈಶ್ವರಪ್ಪ ಸಿದ್ದು ವಿರುದ್ಧ ಗುಡುಗಿದ್ರು..
ಆದ್ರೆ, ಸಿಎಂ ಬೊಮ್ಮಾಯಿ, ಆರ್.ಅಶೋಕ್ ಮುಂದೆ ಮಾರಿಹಬ್ಬ ಇದೆ ನಿಜ..ಅದು ಯಾರಿಗೆ ಕಾದಿದೆ ಅನ್ನೋದು ಕಾದು ನೋಡಿ ಎಂದು ಕೈ ನಾಯಕರಿಗೆ ವ್ಯಂಗ್ಯವಾಡಿದ್ರು.
ಬಜೆಟ್ ಮೇಲಿನ ಚರ್ಚೆ ವಿಚಾರದ ಮಧ್ಯೆ ಮಹತ್ವದ ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ರು.. ಹೇಗಾದ್ರೂ ಮಾಡಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ತಯಾರಿ ಮಾಡಿದ್ದು, ಅದು ಮುಂದಿನ ಚರ್ಚೆಯಲ್ಲೂ ಮುಂದುವರೆಯಲಿದೆ.