ಕಾರವಾರ: ಶಾಂತಿ ಕದಡುವ ಕೆಲಸ ಮಾಡುವ PFI, SDPI ಸಂಘಟನೆಗಳನ್ನು ನಿಷೇಧ ಮಾಡುವ ಬದಲು ಅವರ ಕಾರ್ಯಚಟುವಟಿಕೆ ಮೇಲೆ ನಿಗಾ ಇಡುವುದು ಮುಖ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿರಸಿಯಲ್ಲಿ ಮಾತನಾಡಿದ ಇವರು, ಸಂಘಟನೆಗಳ ನಿಷೇಧಿಸುವ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕು. PFI, SDPI ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ. ಹಿಂದೂ ಸಮಾಜ ಯಾರಿಗೂ ಕೆಡುಕು ಮಾಡಿಲ್ಲ. ಎಲ್ಲಾ ಧರ್ಮಗಳನ್ನು ಅಪ್ಪಿಕೊಂಡು ಬದುಕಿದ್ದೇ ತಪ್ಪು ಎಂದಾಗಿಬಿಟ್ಟರೇ ಹೇಗೆ..? ಯಾರಿಗೆ ಜಾತ್ಯಾತೀತವಾದ ಭೋದನೆ ಮಾಡಬೇಕೋ ಅವರಿಗೆ ಭೋದನೆ ಮಾಡಲು ಆಗಿತ್ತಿಲ್ಲ ಎಂದೂ ಹೇಳಿದರು.