ಸಿಲಿಕಾನ್ ಸಿಟಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ; ನಾಲ್ಕನೇ ದಿನವೂ ಪಾದಯಾತ್ರೆಯಲ್ಲಿ ಜನಸಾಗರ
ಯೆಸ್..ಕಳೆದ ನಾಲ್ಕು ದಿನಗಳಿಂದ ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮುಂದುವರಿದಿದೆ. ಎರಡು ದಿನಗಳಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸುತ್ತಿದೆ. ನಾಯಕರ ಉತ್ಸಾಹವೂ ಕುಗ್ಗಿಲ್ಲ. ಜನರ ಬೆಂಬಲವೂ ನಿಲ್ತಿಲ್ಲ. ದಿನದಿಂದ ದಿನಕ್ಕೆ ಪಾದಯಾತ್ರೆಯಲ್ಲಿ ಭಾಗವಹಿಸುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಸರಿಸುಮಾರು 10 ಸಾವಿರಕ್ಕೂ ಹೆಚ್ಚಿನ ಜನ ಪಾಲ್ಗೊಂಡಿದ್ರು.
ಕೆಂಗೇರಿಯಿಂದ ಬಿಟಿಎಂ ಲೇಔಟ್‌ವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಈಗ ಬಿಟಿಎಂ ಲೇಔಟ್‌ನಿಂದ ಅರಮನೆ ಮೈದಾನದವರೆಗೆ ನಡೆಯಿತು. ಬಿಟಿಎಂ ಲೇಔಟ್‌ನಂತ್ರ ಶಾಂತಿನಗರ, ಸಿವಿ ರಾಮನಗರ್ ಹಾಗೂ ಶಿವಾಜಿನಗರ, ಪುಲಿಕೇಶಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸ್ತು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಜನ ಭರ್ಜರಿಯಾಗಿಯೇ ಸ್ವಾಗತಿಸಿದ್ರು. ಹೋರಾಟದಲ್ಲಿ ಪಾಲ್ಗೊಂಡವರಿಗೆ ತೊಂದರೆಯಾಗದಂತೆ ಎಲ್ಲಾ ಕಡೆಯೂ ಮಜ್ಜಿಗೆ, ಹಣ್ಣು, ನೀರು, ಜ್ಯೂಸ್ ಹಾಗೂ ಊಟೋಪಚಾರದ ವ್ಯವಸ್ಥೆಯನ್ನ ಮಾಡಲಾಗಿತ್ತು.
ಪಾದಯಾತ್ರೆಯಲ್ಲಿ ಒಟ್ಟಿಗೆ ಸಾಗದ ಸಿದ್ದು, ಡಿಕೆಶಿ..!; ಒಬ್ಬರು ಹಿಂದೆ..ಹಿಂದೆ..ಮತ್ತೊಬ್ಬರು ಮುಂದೆ..ಮುಂದೆ..!
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಎರಡು ದಿನ ಒಟ್ಟಿಗೆ ನಡೆದಿದ್ದ ನಾಯಕರಿಬ್ಬರು ಅಂತರ ಕಾಯ್ದುಕೊಳ್ತಿದ್ದಾರೆ. ಡಿಕೆಶಿ ಒಂದು ಕೀಲೋಮೀಟರ್ ಹಿಂದೆ ನಡೆದು ಬಂದ್ರೆ, ಸಿದ್ದರಾಮಯ್ಯ ಒಂದು ಕೀಲೋಮೀಟರ್ ಮುಂದೆ ಮುಂದೆ ನಡೆದು ಸಾಗಿದ್ರು. ಇಬ್ಬರೂ ಒಟ್ಟಾಗಲೇ ಇಲ್ಲ.
ಇನ್ನು ಪಾದಯಾತ್ರೆಗೆ ವಿಶೇಷ ಕಳೆ ಬಂದಿತ್ತು. ಮಹದಾಯಿ ಯೋಜನೆಗಾಗಿ ಆಗ್ರಹಿಸಿ ನರಗುಂದ, ನವಲಗುಂದದಲ್ಲಿ ಸುದೀರ್ಘ ಹೋರಾಟ ನಡೆಸಿದ್ದ 300 ಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡ್ರು. ರೈತರು ಮೇಕೆದಾಟು ಯೋಜನೆ ಪರ ಘೋಷಣೆ ಕೂಗಿದ್ರು. ಇವ್ರ ಜೊತೆ ಕೋನರೆಡ್ಡಿ ನೇತೃತ್ವದ ನವಲಗುಂದದ ರೈತರು ಪಾಲ್ಗೊಂಡಿದ್ದರು.
ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಟ್ರಾಫಿಕ್ ಕಿರಿ ಕಿರಿ ಅನುಭವಿಸಿದರು. ಒಟ್ಟಿನಲ್ಲಿ ನಾಲ್ಕನೇ ದಿನ ಬಿಟಿಎಂ ಲೇಔಟ್ ನಿಂದ ಅರಮನೆ ಮೈದಾನದವರೆಗೆ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಜನ ಬೆಂಬಲವೂ ಜೋರಾಗಿಯೇ ಇದೆ. ಇನ್ನು ಅರಮನೆ ಮೈದಾನದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ನಂತರ ಸಮಾರೋಪ ಸಮಾರಂಭದ ಮೂಲಕ ಗುರುವಾರ ಯಾತ್ರೆ ಪೂರ್ಣಗೊಳ್ಳಲಿದೆ.
ಬಸವರಾಜ್ ಚರಂತಿಮಠ್ ಪೊಲಿಟಿಕಲ್ ಬ್ಯೂರೊ ಪವರ್ ಟಿವಿ ಬೆಂಗಳೂರು