Saturday, April 26, 2025

‘ರಷ್ಯಾವನ್ನು ಎದುರಿಸಲು ಉಕ್ರೇನ್​ ಸಿದ್ಧ’ : ಅಧ್ಯಕ್ಷ ವೊಲೊಡಿಮಿರ್

ಉಕ್ರೇನ್: ಉಕ್ರೇನ್ ವಿರುದ್ಧ ರಷ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಣೆ ಮಾಡಿದ್ದು, ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುಟಿನ್ ಮಿಲಿಟರಿ ಕಾರ್ಯಾಚರಣೆಗೆ ಸೂಚನೆ ನೀಡುತ್ತಿದ್ದಂತೆಯೇ ಉಕ್ರೇನ್ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು, ನಮ್ಮ ದೇಶದ ರಕ್ಷಣೆಗೆ ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ರಷ್ಯ ಸೇನೆಯ ಎರಡು ಲಕ್ಷಕ್ಕೂ ಅಧಿಕ ಯೋಧರು ನಮ್ಮ ಬಾರ್ಡರ್‌ಗೆ ಬಂದಿದ್ದಾರೆ. ನಮ್ಮ ದೇಶದ ರಕ್ಷಣೆಗೆ ನಾವು ಸದಾ ಬದ್ಧ. ನಮ್ಮವರ ರಕ್ಷಣೆಗೆ ಸನ್ನದ್ಧರಾಗಿದ್ದೇವೆ. ಮಿಲಿಟರಿ ಆಪರೇಷನ್‌ಗಳಿಂದ ಉಕ್ರೇನಿಯನ್ನರು ಸ್ವತಂತ್ರರಾಗುತ್ತಾರೆ ಎಂದು ರಷ್ಯ ಹೇಳುತ್ತಿದೆ. ಆದರೆ, ಉಕ್ರೇನ್ ಈಗಾಗಲೇ ಮುಕ್ತ ಹಾಗೂ ಸ್ವತಂತ್ರ ದೇಶವಾಗಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES