Saturday, May 4, 2024

ಕೊವಿಡ್​​​ ಲಸಿಕೆ ಸಿಗದೆ ಮಕ್ಕಳು, ಪೋಷಕರು ಹೈರಾಣ

15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊವಿಡ್‌ ಲಸಿಕೆ ನೀಡಲು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿನ ಗೊಂದಲದಿಂದ ಸಾವಿರಾರು ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಜನ್ಮ ದಿನಾಂಕದ ಬದಲು ಕೇವಲ ಜನಿಸಿದ ವರ್ಷ ಆಧರಿಸಿ ಲಸಿಕೆ ನೀಡುತ್ತಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.

ವಿಶೇಷವಾಗಿ 2007ರ ಡಿಸೆಂಬರ್‌ 31ರೊಳಗೆ ಜನಿಸಿದ ಮಕ್ಕಳು ಮಾತ್ರ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. 2008ರ ಜನವರಿ ನಂತರ ಜನಿಸಿದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿಲ್ಲ. ಲಸಿಕೆ ಪಡೆಯಲು ಹೋದಾಗ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಇತ್ತೀಚೆಗೆ ಕೊರೋನಾ 3ನೇ ಅಲೆ ತೀವ್ರಗೊಂಡ ಸಂದರ್ಭದಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಲಾಗದೇ ಆತಂಕಗೊಂಡಿದ್ದರು.

ಈ ಹಿಂದೆ ಕೇಂದ್ರ ಸರ್ಕಾರ ಹಂತ ಹಂತವಾಗಿ 60, 45 ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಂದರ್ಭದಲ್ಲಿ ಹುಟ್ಟಿದ ವರ್ಷ, ದಿನಾಂಕ ಪರಿಗಣಿಸಿ ಲಸಿಕೆ ನೀಡುತ್ತಿತ್ತು. ಪೋರ್ಟಲ್‌ನಲ್ಲಿಯೂ ಸಹ ನಿಗದಿಪಡಿಸಿದ ವಯಸ್ಸು ದಾಟಿದವರು ಮಾತ್ರ ನೋಂದಣಿಯಾಗುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗಿತ್ತು. ಆದರೆ ಈಗ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನದಲ್ಲಿ ಕೇವಲ ಹುಟ್ಟಿದ ವರ್ಷವನ್ನ ಮಾತ್ರ ಪರಿಗಣಿಸಿರುವುದರಿಂದ ಈಗತಾನೇ 15 ವರ್ಷಕ್ಕೆ ಕಾಲಿಟ್ಟ ಮಕ್ಕಳು ಲಸಿಕೆ ಪಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ.

ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಕೊವಿಡ್‌ ಲಸಿಕೆ ನೀಡುವ ಅಭಿಯಾನ ಆರಂಭಿಸಿದ್ಧ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ನೀಡಲು ಅನುಮತಿ ನೀಡಿತ್ತು. ಪ್ರಾರಂಭದಲ್ಲಿ ಲಸಿಕಾ ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿತ್ತು. ಶಾಲಾ-ಕಾಲೇಜುಗಳಿಗೆ ಹೋಗಿ ವ್ಯಾಕ್ಸಿನ್​ ನೀಡಿದ್ದರು. ಆದರೆ ಎರಡನೇ ಡೋಸ್‌ ಪಡೆಯಲು ಮಕ್ಕಳು ಲಸಿಕಾ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವಿಶೇಷವೆಂದರೆ ಇನ್ನೂ ಸುಮಾರು 8 ಲಕ್ಷ ಮಕ್ಕಳು ಮೊದಲ ಡೋಸ್‌ ಕೂಡ ಪಡೆದಿಲ್ಲ. ಇನ್ನು ಈ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌ ಹೇಳುವುದು ಹೀಗೆ ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮಕ್ಕಳಿಗೆ ಲಸಿಕೆ ನೀಡಲು ಸಾಫ್ಟ್​​ವೇರ್ ಸಮಸ್ಯೆ ಒಂದೆಡೆಯಾದ್ರೆ, ಮತ್ತೊಂದೆಡೆ ಬೂಸ್ಟರ್ ಡೋಸ್ ಕೂಡ ನೀಡ್ತಿರೋದ್ರಿಂದ ಕೋವ್ಯಾಕ್ಸಿನ್​ಗೆ ಅಭಾವ ಉಂಟಾಗಿದೆ‌.

RELATED ARTICLES

Related Articles

TRENDING ARTICLES