ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಶುಲ್ಕ 250 ರೂ.ಗಳಿಗೆ ಕಡಿತಗೊಳಿಸುವುದು, ಪರಿಷತ್‍ನ ತಂತ್ರಜ್ಞಾನ ಅಳವಡಿಕೆಗೆ ಅಪ್ಲಿಕೇಶನ್ ರಚನೆ, ಸದಸ್ಯತ್ವಕ್ಕೆ ನಿಗದಿಪಡಿಸಿರುವ ಶೈಕ್ಷಣಿಕ ಮಾನದಂಡಗಳಿಂದ ಕಲಾವಿದರಿಗೆ ವಿನಾಯ್ತಿ ನೀಡುವುದು ಸೇರಿದಂತೆ ಕಸಾಪ ನಿಬಂಧನೆಗಳ ತಿದ್ದುಪಡಿ ಸಮಿತಿ ಮಾಡಿರುವ ಶಿಫಾರಸ್ಸಿಗೆ ಬಹುತೇಕ ಸಹಮತ ವ್ಯಕ್ತವಾಗಿದೆ.
ಸಮೀತಿಯಲ್ಲಿ ನಡೆದ ಈ ಬೆಳವಣಿಗೆಯನ್ನು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸಲು ಒಂದು ಕೋಟಿ ಸದಸ್ಯತ್ವದ ಗುರಿ ಹೊಂದಿರುವುದರಿಂದ ಸದಸ್ಯತ್ವ ಮತ್ತು ಕನ್ನಡ ನುಡಿ ಶುಲ್ಕ ಇಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.