ಉಡುಪಿ: ಹಿಜಾಬ್ ವಿಚಾರದಲ್ಲಿ ಎಸ್ಡಿಪಿಐನಂಥ ಸಂಘಟನೆಗಳಿಗೆ ಉತ್ತರ ಹೇಳುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದ ಮುಸ್ಲಿಮರು ಪ್ರಶ್ನೆ ಕೇಳಿದರೆ ಉತ್ತರಿಸುತ್ತೇನೆ. ಹೊರಗಿನಿಂದ ಬಂದವರಿಗೆ ಏಕೆ ಉತ್ತರಿಸಬೇಕು. ಎಸ್ಡಿಪಿಐನಿಂದ ಪ್ರಶಂಸಾ ಪತ್ರ ಪಡೆಯುವ ಅಗತ್ಯ ನನಗಿಲ್ಲ. ಕಾಂಗ್ರೆಸ್ ನಾಯಕರ ಬೆಂಬಲವೂ ನಮಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಶಾಸಕ ರಘುಪತಿ ಭಟ್ ಅಜ್ಞಾನಿ, ಅನರ್ಹ ಶಾಸಕ ಎಂಬ ಎಸ್ಡಿಪಿಐ ಆರೋಪದ ಬಗ್ಗೆ ಶಾಸಕರು ಪ್ರತಿಕ್ರಿಯಿಸಿದರು. ನಾನೆಂದೂ ಇಸ್ಲಾಮ್ ಧರ್ಮದ ಅಥವಾ ಮುಸ್ಲಿಮರ ಆಚರಣೆ ವಿರುದ್ಧ ಮಾತನಾಡಿಲ್ಲ. ಹೊರಗಿನಿಂದ ಬಂದು ಬೆಂಕಿ ಹಾಕುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಹಿಜಾಬ್ ಬಗ್ಗೆ ಇಸ್ಲಾಮ್ನಲ್ಲಿ ಉಲ್ಲೇಖವಿದೆ. ಅವರು ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆಡೆ ಹಿಜಾಬ್ ಹಾಕಲಿ ಎಂದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಈ ವಿಷಯದಲ್ಲಿ ಕಾಂಗ್ರೆಸ್ ಬೆಂಬಲ ನಮಗಿದೆ ಎಂದು ಹೇಳಿದ್ದಾರೆ! ಇದು ನಿಜವೋ ಅಥವಾ ಬಿಜೆಪಿ ನಾಯಕರ 2 ಕೋಟಿ ಉದ್ಯೋಗ ಸೃಷ್ಟಿ, ಎಲ್ಲಾ ಬಡವರಿಗೆ ‘ಪಕ್ಕಾ ಮಕಾನ್’ ಎಂಬ ಬಿಜೆಪಿ ಮುಖಂಡರ ಹೇಳಿಕೆಯಂತೆ ಇದೂ ಒಂದು ಸುಳ್ಳು ಹೇಳಿಕೆಯೋ ಎಂಬುದನ್ನು ಇದೀಗ ಕಾಂಗ್ರೆಸಿಗರು ಸ್ಪಷ್ಟಪಡಿಸಬೇಕಿದೆ.