Friday, November 22, 2024

ಹರಕಲು ಬಾಯಿ ಈಶ್ವರಪ್ಪ : ಡಿ‌ಕೆಶಿ

ಬೆಂಗಳೂರು : ಅಹೋರಾತ್ರಿ ಧರಣಿ ಮಾಡುದರ ಮೂಲಕ ಬಿಜೆಪಿಗೆ ಕೈ ನಾಯಕರು ಬಿಸಿ ಮುಟ್ಟಿಸಿದ್ದಾರೆ. ಸದನದಲ್ಲಿ‌ ಮಲಗಿ ವಿಧಾನಸೌಧದ ಹೊರಭಾಗದಲ್ಲಿ ವಾಕಿಂಗ್ ಮಾಡುದರ ಮೂಲಕ ಕೈ‌ನಾಯಕರು ಬಿಜೆಪಿ ‌ನಿದ್ದೆಕೆಡಿಸಿದ್ದಾರೆ.

ಇನ್ನು, ಈ ವೇಳೆ ಮಾತನಾಡಿದ ಡಿ‌ಕೆ ಶಿವಕುಮಾರ್ ನಮ್ಮ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ.
ನಮಗೆ ಹರಕಲು ಬಾಯಿ ಈಶ್ವರಪ್ಪ ರಾಜೀನಾಮೆ ಬೇಕಾಗಿಲ್ಲ, ಆದರೆ ಸ್ಪೀಕರ್, ರಾಜಪಾಲರು ಅವರನ್ನು ವಜಾಗೊಳಿಸಬೇಕು. ಬಿಜೆಪಿ ಪಾರ್ಟಿಯೇ ಅವನನ್ನು ಆಸ್ತಿವಂತ ಅಂತ ಮಾತಾಡ್ತಿದ್ದಾರೆ ಎಂದರು. ಅಲ್ಲದೆ ರಾತ್ರಿ ಇರಬೇಡಿ ಅಂತ ಕೋರಿಕೊಂಡರು ಆದ್ರೆ ಇರ್ಬೇಡಿ ಅಂತ ಹೇಳಿಲ್ಲ. ಈಶ್ವರಪ್ಪ ಮೇಲೆ ರಾಷ್ಟ್ರದ್ರೋಹದ ಕೇಸ್ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರಿಗೆ ರಾಷ್ಟ್ರ ಧ್ವಜ ಅಂದ್ರೆ ಏನ್ ಅಂತ ಗೊತ್ತಿಲ್ಲ ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ.ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ಇದೆ, ತ್ರಿವರ್ಣ ಧ್ವಜ ಕೊಟ್ಟವರು ಕಾಂಗ್ರೆಸ್​​ನವರು, ಹಾಗೂ ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಇವರು ಸಿಎಂ ಆಗಿದ್ದು, ದೇಶಕ್ಕೊಸ್ಕರ ಹೋರಾಟವನ್ನು ಅವರು‌ ಮಾಡಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರುಗಳ ಬಗ್ಗೆ ಕಿಡಿಕಾರಿದ್ದಾರು.

ನಮ್ ಅಪ್ಪನ ಬಗ್ಗೆ ಮಾತನಾಡಿದ್ದಾರೆ, ನಮ್ಮ ಅಪ್ಪ ಮೇಲೆ ಇದ್ದಾರೆ ಆದರೆ, ಇದಕ್ಕೆಲ್ಲಾ ಟೈಂ ಬಂದಾಗ ಉತ್ತರ ಕೊಡತ್ತೀನಿ. ಸ್ಪೀಕರ್ ಅವರ ಸ್ಥಾನಕ್ಕೆ ತಕ್ಕಂತೆ ಇರಬೇಕು ಹೆಗಡೆ ಸಂವಿಧಾನ ಚೇಂಜ್ ಮಾಡಬೇಕು ಅಂದಾಗ ಡ್ರಾಪ್ ಮಾಡಿದ್ರಲ್ವಾ.ಈಶ್ವರಪ್ಪ ಮುತ್ತುರತ್ನವಾದರೆ ಹಾಗೇ ಇಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES