Saturday, November 2, 2024

ಮಂತ್ರಿಯಾದರೇನು, ಶಾಸಕರಾದರೇನು? ಕೇಸ್ ದಾಖಲಿಸಬೇಕು : ಡಿಕೆಶಿ

ಬೆಂಗಳೂರು : ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ ಕೆ ಶಿವಕುಮಾರ್​​ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ, ಶಾಲಾ ಕಾಲೇಜುಗಳಲ್ಲಿ ಅನ್ಯಾಯವಾಗುತ್ತಿದೆ. ನಾರಾಯಣಗುರು ವಿಚಾರದಲ್ಲಿ ಅನ್ಯಾಯವಾಗಿದೆ. ಬಿಟ್ ಕಾಯಿನ್ ೪೦% ಕಮೀಷನ್ ಆರೋಪವಿದೆ. ಅದಕ್ಕೆ ಮಕ್ಕಳನ್ನ‌ ಎತ್ತಿ ಕಟ್ಟುತ್ತಿದ್ದಾರೆ. ಹೀಗಾಗಿ ನಾವು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುತ್ತಿದ್ದೀವಿ. ಸರ್ಕಾರ ಪೊಲೀಸ್ಅ ಧಿಕಾರಿಗಳನ್ನ ಬಳಿಸಿಕೊಳ್ಳುತ್ತಿದೆ. ಅವರ ಪಾರ್ಟಿಯವರ ಮೇಲೆ ಕೇಸ್ ಹಾಕಲ್ಲ. ಅಧಿಕಾರಿಗಳು ಇಬ್ಬಂದಿತನ ತೋರುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಲಿ ನಡೆಸಿದರು.

ಇನ್ನು, ಸಚಿವ ಕೆಎಸ್​​ ಕೆಶ್ವರಪ್ಪ ಅವರು  ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ರಾಷ್ಟ್ರ ಧ್ವಜದ ಕೇಸ್ ದಾಖಲಿಸಬೇಕು. ಮಂತ್ರಿಯಾದರೇನು,ಶಾಸಕರಾದರೇನು? ಅವರ ಮೇಲೆ ಮೊದಲು ಕೇಸ್ ರಿಜಿಸ್ಟರ್ ಮಾಡಬೇಕು ಹಾಗೂ ಅವರನ್ನ ಸಚಿವ ಸ್ಥಾನದಿಂದ ಕೈಬಿಡುವಂತೆ ಸರ್ಕಾರಕ್ಕೆ ಡಿಕೆ ಶಿವಕುಮಾರ್​​ ಅವರು ಒತ್ತಾಯ ಮಾಡಿದರು.

RELATED ARTICLES

Related Articles

TRENDING ARTICLES