ಬೆಂಗಳೂರು: ರಾಜ್ಯ ಸಾರಿಗೆ ಸಾರಿಗೆ ಇಲಾಖೆಯಲ್ಲಿ ನಡೆದಿರುವ ಮಹಾದಂಧೆ ಸಾರಿಗೆ ಇಲಾಖೆ ಭ್ರಷ್ಟ ಅಧಿಕಾರಿಗಳ ಮುಖವಾಡ ಮತ್ತೊಮ್ಮೆ ಬಯಲಾಗಿದೆ.
RTO ಅಧಿಕಾರಿಗಳಿಗೆ ಐಷಾರಾಮಿ ಕಾರುಗಳೇ ಟಾರ್ಗೆಟ್ ಆಗಿದ್ದು, ರೋಡ್ ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ವಂಚನೆ ಮಾಡಿದೆ. ಈ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಆಫೀಸರ್ಸ್ ಇದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ದುಡ್ಡಿನ ದುರಾಸೆಗೆ ಆಯ್ಕೆ ಮಾಡಿಕೊಂಡಿದ್ದು ಐಷಾರಾಮಿ ಕಾರುಗಳ ಅಕ್ರಮ ನೋಂದಣಿ ಮಾಡಿದ್ದು 2015 ರಿಂದ 2021 ರ ಅವಧಿಯಲ್ಲಿ ಬೆಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗಳಲ್ಲಿ ಬೃಹತ್ ಗೋಲ್ಮಾಲ್ ಆಗಿದೆ. 120 ಐಷಾರಾಮಿ ಕಾರುಗಳನ್ನ ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ಅಕ್ರಮವಾಗಿ ನೋಂದಣಿಯನ್ನು ಮಾಡಿದೆ.
ಕಾರುಗಳನ್ನ ಮುಟ್ಟುಗೋಲು ಹಾಕಿಕೊಂಡು ತೆರಿಗೆ ವಸೂಲಿ ಮಾಡಲು ರಾಜ್ಯ ಸಾರಿಗೆ ಇಲಾಖೆ ಕಮಿಷನರ್ ಆದೇಶದ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಯಲ್ಲಿ ಬಯಲಾಯಿತು 100 ಕೋಟಿ ಕ್ಕಿಂತ ಹೆಚ್ಚು ಅಕ್ರಮ ತೆರಿಗೆ ವಂಚನೆ ಪಟ್ಟಿಯಲ್ಲಿ ರಾಜಕಾರಣಿ ಗಳು,ಉದ್ಯಮಿಗಳು ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳ ಆಡಿ,ಜಾಗ್ವಾರ್,ಮಸಿರ್ಡಿಸ್ಬೆಂಜ್,ಬಿಎಂಡಬ್ಲ್ಯೂ,ಪೋರ್ಶೆ,ಲ್ಯಾಂಬೋಗಿರ್ನಿ,ವೋಲ್ವೋ,ರೇಂಜ್ರೋವರ್,ಎಂಡೇವೋರ್,ಫಾರ್ಚೂರ್,ಸ್ಕೋಡಾ ಕಾರುಗಳು ಸೇರಿವೆ. ಈ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಾ ಎಂದು ಕಾದು ನೋಡಬೇಕಿದೆ.