Monday, November 25, 2024

ರೇಣುಕಾಚಾರ್ಯ ಬಹಳ ಒಳ್ಳೆಯ ಮಾತನ್ನ ಹೇಳಿದ್ದಾರೆ..? ; ಹೆಚ್ ಆಂಜನೇಯ

ಕೊಪ್ಪಳ : ಕಾಲೇಜ್ ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳು ಉಡುಪು ಪ್ರಚೋದನೆ ಕೊಡತ್ತೋ. ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ನೀವೆ ನೋಡಿ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಧ್ಯಾರ್ಥಿಗಳ ಸಮವಸ್ತ್ರ ವಿಚಾರಕ್ಕೆ ರೇಣುಕಾಚಾರ್ಯರ ಹೇಳಿಕೆ ಪ್ರತಿಕ್ರಿಯಿಸಿದ ಆಂಜನೇಯ ಪರೋಕ್ಷವಾಗಿ ಹಿಜಾಬ್ ಸಮರ್ಥನೆ ಮಾಡಿಕೊಂಡ ಹಾಗೆ ಹೇಳಿಕೆಯನ್ನು ನೀಡಿದ್ದಾರೆ. ರೇಣುಕಾಚಾರ್ಯ ಬಹಳ ಒಳ್ಳೆಯ ಮಾತನ್ನು ಹೇಳಿದ್ದಾರೆ. ಉಡುಪುಗಳು ಪ್ರಚೋದನೆಗೆ ಕಾರಣ ಎಂದಿದ್ದ ರೇಣುಕಾಚಾರ್ಯ ಇದಕ್ಕೆ ಆಂಜನೇಯ ಕಾಲೇಜ್ ಮುಂದೆ ಹೋಗಿ ನೋಡಿ ಯಾರ ಉಡುಪು ಪ್ರಚೋದನೆ ಕೊಡತ್ತೆ ಎಂದು ಹೇಳಿದ್ದಾರೆ. ನಮ್ಮ ಮಕ್ಕಳ ಉಡುಪುಗಳೇ ಪ್ರಚೋದನೆಗೆ ಕಾರಣ ಅನ್ನೋ ಅರ್ಥದಲ್ಲಿ ಆಂಜನೇಯ ಮಾತನಾಡಿದ್ದಾರೆ.

ಮುಸ್ಲಿಂ ಮಹಿಳೆಯರನ್ನ ಯಾರೂ ನೋಡಲ್ಲ ಹಾಗಾಗಿ ಅವರು ಹಿಜಾಬ್ ಹಾಕ್ತಾರೆ, ರೇಣುಕಾಚಾರ್ಯ ಅವರ ಪರವಾಗಿ ಮಾತಾಡಿದ್ದಾರೆ ಎಂದು ರೇಣುಕಾಚಾರ್ಯ ಹೇಳಿಕೆಯನ್ನು ಸ್ವಾಗತಿಸಿದರು. ಮಕ್ಕಳ ಕೈಲಿ ಕಲ್ಲು ಚಾಕು ಕೊಟ್ಟಿದ್ದೇ ಬಿಜೆಪಿಗರು ಮೊದಲು ಚುನಾವಣೆಗಾಗಿ ಗಲಾಟೆ ನಡೆಯುತ್ತಿತ್ತು.ಇವತ್ತು ಅವರನ್ನು ಬೀದಿಗಿಳಿಸಿದ್ದಾರೆ. ಗಲಾಟೆಗ ಪ್ರಚೋದನೆ ಕೊಡೋದೆ ಅವರ ತತ್ವ ಸಿದ್ದಾಂತ ಎಂದು ಆಂಜನೇಯ ಗದರಿದರು.ನಾವ ಎತ್ತಿ ಕಟ್ಟೋ ಕೆಲಸ ಮಾಡಲ್ಲ,ಇದು ಬಿಜೆಪಿಯವರು ಮಾಡಿದ್ದು.ನಾವು ಅವರ ಹಿಂದಿದ್ರೆ ನಾವು ಅವರ ಕಡೆ ಕಾಂಗ್ರೆಸ್ ದ್ವಜ ಕೊಡ್ತೀದ್ವಿ ಎಂದರು.

ಹಿಜಾಬ್ ಗಲಾಟೆಗೆ ಬಿಜೆಪಿ ಕಾರಣ ಬಿಜೆಪಿಯವರು ಶಾಲು,ಪೇಟಾ ವಿತರಣೆ ಮಾಡಿದ್ದಾರೆ ಎಂದು ಆಂಜನೇಯ ಆರೋಪಿಸಿದರು. ಹಾಗು ಅವರು ನೂರಾರು ವರ್ಷಗಳಿಂದ ಹೇಗೆ ನಡಿತಾರೆ ಹಾಗೆ ಇರಲಿ, ಮುಂಚೆ ಇರೋ ಪದ್ದತಿಯೇ ಇರಲಿ ಬಟ್ಟೆ ಇದನ್ನೆ ಹಾಕಬೇಕು ಅನ್ನೋದು ಯಾವ ನ್ಯಾಯ.

ಇನ್ನೂ ಕಾಂಗ್ರೆಸ್ ನಿಂದ ಬಿಜೆಪಿಗೆ ಕೆಲ ಶಾಸಕರು ಹೋಗ್ತಾರೆ ಎನ್ನುವ ಚರ್ಚೆಗೆ ಪ್ರತಿಕ್ರಿಯಿಸಿದ ಆಂಜನೇಯ ಕಾಂಗ್ರೆಸ್ ನಿಂದ ವಾಪಸ್ ಹೋದವರನ್ನು ಯಾರನ್ನೂ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲ್ಲ.ಇಗಲೇ ಕೆಲವರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಕಳೆದ ಬಾರಿ ಬಿಜೆಪಿಯವರು ಹಸು,ಹಂದಿ,ನಾಯಿ ,ನರಿ ಖರೀದಿ ಮಾಡುವಂತೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ರು.

ಬಿಜೆಪಿಗೆ ಹೋಗಿರೋ ಶಾಸಕರನ್ನು ನಾಯಿ,ನರಿ,ಹಸು ಹಂದಿಗೆ ಹೋಲಿಸಿದರು.ಈ ಬಾರಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆಲ್ಲಲಿದೆ ಕಾಂಗ್ರೆಸ್ ಬಿಟ್ಟು ಹೋದವರನ್ನುವಾಪಸ್ ಸೇರಿಸಿಕೊಳ್ಳೋ ಅವಶ್ಯಕತೆ ಇಲ್ಲ. ಅವರು ಸಮಯ ಸಾಧಕರು ನಮ್ಮಲ್ಲಿ ಪಕ್ಷ ಕಟ್ಟಿರ್ತಾರೆ,ಬೇರೆಯವರನ್ನು ನಾವು ಸೇರಿಸಿಕೋಂಡ್ರೆ ಅವರಿಗೆ ತೊಂದರೆ ಆಗತ್ತೆ ಹೀಗಾಗಿ ಯಾರನ್ನೂ ಕರೆದುಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಗೆ ಹೋದವರನ್ನು ಯಾರನ್ನೂ ಸೇರಿಸಿಕೊಳ್ಳಲ್ಲ ಎಂದರು.

ಅವರ ಅಗತ್ಯವೇ ನಮಗಿಲ್ಲ ನಾವೇ ಬಹುಮತ ಪಡೆಯೋದು ಗ್ಯಾರಂಟಿ ಎಂದ ಯಾರಾದ್ರೂ ಸಂವಿಧಾನ ಬದಲವಾಣೆ ಮಾಡಿದ್ರೆ ರಕ್ತದ ಕೋಡಿ ಹರಿಯುತ್ತದೆ. ಕನ್ಯಾಕುಮಾರಿ ಇಂದ ಹಿಡಿದು ಕಾಶ್ಮೀರದವರೆಗೂ ರಕ್ತದ ಕೋಡಿ ಹರಿಯತ್ತೆ ಎಂದು ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES