ವಿಜಯಪುರ: ನಾನು ಎಲ್ಲಿಯೂ ಸಚಿವಸ್ಥಾನ ಇದೇ ಕೊಡಿ, ಅದೇ ಕೊಡಿ ಅಂತ ಕೇಳಿಲ್ಲ. ಸಂಪುಟ ವಿಸ್ತರಣೆ ಆದ್ರೇ, ಯಾವುದಾದರೂ ಖಾತೆ ಕೊಡಲಿ. ನಗರಾಭಿವೃದ್ಧಿ ಆದ್ರೂ ಸರಿ, ಅಥವಾ ಬೇರೆಯ ಸಚಿವಸ್ಥಾನವಾದ್ರೂ ಓಕೆ. ಒಂದು ವೇಳೆ ಗೃಹ ಸಚಿವರ ಖಾತೆ ಕೊಟ್ಟರೇ, ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅಂತ್ಯ ಹಾಡೋದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಿದೆ. ಇಲ್ಲಿ ದೇಶಭಕ್ತಿಗೆ ಮಾತ್ರವೇ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಪ್ರದಾಯಕ್ಕೆ ಅವಕಾಶವಿಲ್ಲ. ಯುವ ಜನರು ಜಾಗೃತರಾಗಬೇಕು. ದೇಶಭಕ್ತರಾಗಬೇಕು. ಎಲ್ಲಾ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಹೇಳಿದರು.
ಇನ್ನು, ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿಚಾರವಾಗಿ ಕಾಂಗ್ರೆಸ್ ವಿರುದ್ದ ಯತ್ನಾಳ್ ಹಾರಿಹಾಯ್ದದಿದ್ದಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನವರು ಮುಸ್ಲೀಂಮರಿಗೆ ನೀಡಿದ ಸೌಲಭ್ಯಗಳನ್ನು ಇವರು ದುರುಪಯೋಗ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಅದೆಲ್ಲಾ ನಡೆಯಲ್ಲಾ, ದೇಶದಲ್ಲಿ ಮೋದಿ ಸರ್ಕಾರವಿದೆ. ತ್ರಿಬಲ್ ತಲಾಕ್ ನೀಡಿ ಬೇಕಾದಷ್ಟು ಮಕ್ಕಳು ತಯಾರಿಸೋ ಫ್ಯಾಕ್ಟಿರಿಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಯುವ ಜನಾಂಗ ಜಾಗೃತವಾಗಿ ದೇಶ ಭಕ್ತರಾಗಿದ್ದಾರೆ. ಹಿಂದಿನ ಕಾಲ ಬೇರೆ, ಇಂದಿನ ಕಾಲ ಬೇರೆ ಎಂದರು ಯತ್ನಾಳ್. ವಿದ್ಯಾರ್ಥಿಗಳು ಕೇಸರಿ ಶಾಲ್ ಹಾಕಿಕೊಂಡಿದ್ದು ಒಳ್ಳೆಯ ಸಂಕೇತ ಕೊಟ್ಟಿದ್ದಾರೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾರಿಯಾಗಿರೋ ವಸ್ತ್ರನೀತಿ ಪಾಲನೆ ಮಾಡಬೇಕೆಂದು ಒತ್ತಾಯ. ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಹಾಕಿದ್ದು ಪ್ರತಿಕ್ರಿಯೆಯಾಗಿದೆ ಎಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.