ನವದೆಹಲಿ: ಶ್ರೀಮಂತರಿಗಾಗಿ, ಬಡವರಿಗಾಗಿ ಭಾರತವನ್ನು 2 ವಿಭಾಗವಾಗಿ ವಿಭಜಿಸಲಾಗಿದೆ. ಕೇಂದ್ರ ಸರ್ಕಾರ ಬಡವರಿಂದ ಹಣವನ್ನು ಪಡೆದು ಶ್ರೀಮಂತರಿಗೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ಧಾರೆ.
ನಾನು ನಿನ್ನೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದು, ಅದರಲ್ಲಿ ದೇಶ ಎದುರಿಸುತ್ತಿರುವ ಎರಡು-ಮೂರು ಸವಾಲುಗಳ ಬಗ್ಗೆ ಮಾತನಾಡಿದ್ದೆ. ಬಿಜೆಪಿ ಮತ್ತು ಅದರ ಸಿದ್ಧಾಂತಗಳು ನಮ್ಮ ದೇಶವನ್ನು ಅಪಾಯದತ್ತ ಕೊಂಡೊಯ್ಯುತ್ತಿವೆ. ಮೊದಲ ಗಂಭೀರ ಅಪಾಯವೆಂದರೆ ಬಿಜೆಪಿ ದೇಶವನ್ನು ಎರಡು ದೇಶಗಳಾಗಿ ವಿಭಜಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ತಮ್ಮ ಸಿದ್ಧಾಂತವನ್ನು ಎಲ್ಲಾ ರಾಜ್ಯಗಳ ಮೇಲೆ ಹೇರಲು ಬಯಸುತ್ತವೆ. ಬಿಜೆಪಿ ದೇಶಾದ್ಯಂತ ದ್ವೇಷ ಹರಡಿದೆ. ದೇಶಭಕ್ತಿ ಎಂದರೆ ದೇಶವನ್ನು ಬಲಪಡಿಸುವುದು ಮತ್ತು ಒಗ್ಗೂಡಿಸುವುದು ಎಂದಿದ್ದಾರೆ.