ಬೆಂಗಳೂರು: ಮೊನ್ನೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ.ನಿರ್ಮಾಲ ಸೀತಾರಾಮನ್ ನದಿ ಜೊಡಣೆ ಬಗ್ಗೆ ಮಾತನಾಡಿದ್ದಾರೆ. ನಿರ್ಮಲಾ ತಮಿಳುನಾಡಿನವರು, ನಮ್ಮ ರಾಜ್ಯದ ಜೊತೆ ಚರ್ಚೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು, ಕರ್ನಾಟಕ ಪ್ರದೇಶದಲ್ಲಿ ನದಿಗಳು ಬರ್ತಾವೆ.ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜನ್ಸಿಯಲ್ಲಿ ಸಭೆಯಾಗಿದೆ.ನದಿ ಜೋಡಣೆಯಿಂದ ಹೆಚ್ಚುವರಿ ನೀರು ಸಿಗುತ್ತೆ.೩೪೭ ಟಿ ಎಂಸಿ ನೀರು ಸಿಗುತ್ತೆ, ದಕ್ಷಿಣ ರಾಜ್ಯಗಳಿಗೆ ನೀರು ಕೊಡಬಹುದು.ರಾಜಸ್ಥಾನ ಬಿಟ್ಟರೆ ಹೆಚ್ಚು ಒಣ ಭೂಮಿ ಕರ್ನಾಟಕದಲ್ಲಿ ಇರೋದು ಆಂದ್ರ,ತಮಿಳುನಾಡು ಮಹಾರಾಷ್ಟ್ರ ದಲ್ಲ ೫೫% ನೀರಾವರಿ ಆಗಿದೆ ಎಂದು ಹೇಳಿದರು.
ಆದರೆ ಕರ್ನಾಟಕದಲ್ಲಿ ೩೦% ದಲ್ಲಿ ನೀರಾವರಿ ಮಾತ್ರ ಆಗಿದೆ.ರಾಜಸ್ಥಾನ ಬಿಟ್ಟರೆ ಕರ್ನಾಟಕ ಒಣ ಭೂಮಿ ಪ್ರದೇಶ ಈ ಯೋಜನೆ ಮಾಡಿದರೆ ತಮಿಳುನಾಡಿಗೆ ಹೆಚ್ಚು ನೀರು ಹೊಗುತ್ತೆ.ಯಾವ್ಯಾವ ನದಿಯಿಂದ ಎಷ್ಟು ನೀರು ಹೋಗುತ್ತದೆ ಇದರ ಬಗ್ಗೆ ಕರ್ನಾಟಕ ಜೊತೆ ಚರ್ಚೆ ಮಾಡಿಲ್ಲ.ಚರ್ಚೆ ಮಾಡದೆ ಯೋಜನೆ ಮಾಡಿದರೆ ಅಂತರ್ ರಾಜ್ಯ ನೀರಾವರಿ ಕಿತ್ತಾಟ ಪ್ರಾರಂಭವಾಗುತ್ತೆ.ಹಾಗಾಗಿ ಎಲ್ಲ ದಕ್ಷಿಣ ಭಾರತದ ರಾಜ್ಯದ ಮೀಟಿಂಗ್ ಕರೆಯಬೇಕು. ಎಲ್ಲ ಮಾಹಿತಿ ಜನರ ಮುಂದೆ ಇಡಬೇಕು.ಮೊದಲ ಹಂತದಲ್ಲಿ ಕಡಿಮೇ ನೀರು ಸಿಗುತ್ತೆ, ಎರಡನೇ ಹಂತದಲ್ಲಿ ಹೆಚ್ಚು ನೀರು ಸಿಗುತ್ತೆ ಅಂತಿದ್ದಾರೆ.ನದಿ ಜೋಡಣೆ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.