Saturday, November 23, 2024

ಮಂತ್ರಿಗಿರಿಗಾಗಿ ತೆರೆಮರೆಯಲ್ಲೇ ಆಕಾಂಕ್ಷಿಗಳ ಕಸರತ್ತು..!

ಬೆಂಗಳೂರು : ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ಮೂಹೂರ್ತ ಫಿಕ್ಸ್ ಆಗಿದೆ.. ಸಂಪುಟ ಸರ್ಜರಿಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ಕೊಡುತ್ತೋ..? ಇಲ್ವೋ..? ಅನ್ನೋದು ಇನ್ನೂ ಸಸ್ಪೆನ್ಸ್ ಆಗಿಯೇ ಇದೆ.. ಆದ್ರೆ, ಇತ್ತ ಮಂತ್ರಿಗಿರಿ ಆಕಾಂಕ್ಷಿಗಳಂತೂ ಮತ್ತಷ್ಟು ಆ್ಯಕ್ಟಿವ್​ ಆಗಿದ್ದಾರೆ.. ಸಚಿವ ಸ್ಥಾನ ಪಡೆಯಲೇಬೇಕೆಂದು ನಾನಾ ರಣತಂತ್ರ ಹೆಣೆಯುತ್ತಿದ್ದಾರೆ

ಸೋಮವಾರ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳೋದು ಕನ್ಫರ್ಮ್‌ ಆಗಿದೆ.. ಈ ನಡುವೆ ಸಚಿವಾಕಾಂಕ್ಷಿಗಳಲ್ಲಿ ಮಂತ್ರಿಗಿರಿ ಕನಸು ಚಿಗುರೊಡೆದಿದೆ.. ಆದ್ರೆ, ಸಚಿವ ಸಂಪುಟ ವಿಸ್ತರಣೆಯೋ..? ಪುನಾರಚನೆಯೋ ಅನ್ನೋದು ಕುತೂಹಲ ಮೂಡಿಸಿದೆ.. ಬೊಮ್ಮಾಯಿ ಸಂಪುಟದಿಂದ ಯಾರಿಗೆ ಕೊಕ್‌..? ಯಾರಿಗೆ ಚಾನ್ಸ್‌..? ಅನ್ನೋ ಟೆನ್ಷನ್​ ಶುರುವಾಗಿದೆ.. ಸಿಎಂ ದೆಹಲಿ ಭೇಟಿಗೂ ಮೊದಲೇ ಸಚಿವ ಶ್ರೀರಾಮುಲು ಡಿಸಿಎಂ ಸ್ಥಾನಕ್ಕಾಗಿ ಹೈಕಮಾಂಡ್​ಗೆ ದುಂಬಾಲು ಬಿದ್ದಿದ್ದಾರೆ.. ಇತ್ತ ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡ ದೆಹಲಿಗೆ ಹೋಗಲು ತಯಾರಿ ನಡೆಸುತ್ತಿದ್ಧಾರೆ.

ಇತ್ತ ಯತ್ನಾಳ್ ಕೂಡ ಸಚಿವ ಸ್ಥಾನದ ರೇಸನಲ್ಲಿದ್ದು, ತನ್ನ ಪ್ರಭಾವ ಬಳಸಿ ಮಂತ್ರಿಗಿರಿ ಪಡೆಯಲು ಕಸರತ್ತು ನಡೆಸಿದ್ದಾರೆ.. ಅಲ್ಲದೇ ಹೈಕಮಾಂಡ್, ಈ ಭಾರಿ ಸಂಪುಟ ಪುನಾರಚನೆ ಮಾಡುತ್ತೆ ಎಂಬ ಸುದ್ದಿ ಹರಿದಾಡುತ್ತಿದೆ.. ಹೀಗಾಗಿ 6-7 ಹಿರಿಯ ಸಚಿವರುಗಳಿಗೆ ಕೊಕ್ ನೀಡುವ ಸಾದ್ಯತೆಯಿದೆ.. ಹೀಗಾಗಿ ಖಾಲಿಯಾಗುವ ಸಚಿವ ಸ್ಥಾನಕ್ಕೆ ಮತ್ತಷ್ಟು ಆಕಾಂಕ್ಷಿಗಳು ಲಾಬಿ ನಡೆಸ್ತಿದ್ದು, ಸಿಎಂಗೆ ಆಯ್ಕೆಯ ತಲೆನೋವು ಹೆಚ್ಚಾಗಿದೆ.. ಅತ್ತ ಸಂಪುಟ ಪುನಾರಚನೆ ಆದ್ರೆ ಒಟ್ಟು 10-11 ಜನ ಸಂಪುಟ ಸೇರುವ ಸಾಧ್ಯತೆಯಿದೆ.. ಹೀಗಾಗಿ ಜೊಲ್ಲೆಯನ್ನ ಸಂಪುಟದಿಂದ ತೆಗೆದು ತನಗೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡಿ ಅಂತ ಪೂರ್ಣಿವಾ ಶ್ರೀನಿವಾಸ್ ಬೇಡಿಕೆಯಿಟ್ಟಿದ್ದಾರೆ.

ಪ್ರಭು ಚೌಹಾಣ್ ಗೆ ಸಚಿವ ಸ್ಥಾನದಿಂದ ಕೊಕ್ ಕೊಟ್ರೆ, ಕುಡಚಿ ರಾಜೀವ್ ಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗ್ತಿದೆ.. ಹಾಗೇ ರಾಜುಗೌಡ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿ ಹಲವರು ಸಚಿವ ಸ್ಥಾನದ ರೇಸನಲ್ಲಿದ್ದಾರೆ.. ದಿನ ಕಳೆದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೆಯಿದೆ.. ಆದ್ರೆ ಹೈಕಮಾಂಡ್ ಇವರೆಗೂ ಸಚಿವ ಸಂಪುಟ ವಿಸ್ತರಣೆ ಗೆ ಬಗೆಗಿನ ಮಾತುಕತೆಗೆ ಗ್ರೀನ್ ಸಿಗ್ನಲ್ ನೀಡದೇ ಇರೋದು ಕುತೂಹಲ ಮೂಡಿಸಿದೆ

RELATED ARTICLES

Related Articles

TRENDING ARTICLES