ಬೆಂಗಳೂರು: ಬೆಂಗಳೂರಿನ ತಿಪ್ಪೇನಹಳ್ಳಿಯಲ್ಲಿರುವ ಶ್ರೀ ಕ್ರಿಕೆಟ್ ಮಂದಿರಾ ಗ್ರೌಂಡ್ನಲ್ಲಿ ಶುಕ್ರವಾರದಿಂದ ರಾಜ್ಯಮಟ್ಟದ ಸಂತ್ ಸೇವಾಲಾಲ್ ಕ್ರಿಕೆಟ್ ಕಪ್ ಟೂರ್ನಿಮೆಂಟ್ ನಡೆಯಲಿದೆ. ಬಂಜಾರ ಜನಾಂಗದ ದೇವದೂತರೆಂದೇ ಜನಮಾನಸದಲ್ಲಿ ಬೇರುಬಿಟ್ಟಿರುವ ಸಂತ ಸೇವಾಲಾಲ್ರ 283ನೆಯ ಜಯಂತಿಯ ಸ್ಮರಣಾರ್ಥವಾಗಿ ಈ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾಗಿರುವ ಸುರೇಶ್ ರಾಠೋಡ್ ತಿಳಿಸಿದ್ದಾರೆ.
ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಈ ಟೂರ್ನಿಮೆಂಟ್ನಲ್ಲಿ ತಂಡಗಳು ಭಾಗವಹಿಸುತ್ತಿವೆ. ಟೂರ್ನಿಮೆಂಟ್ ಉದ್ಘಾಟನೆಯನ್ನು ಫೆಬ್ರವರಿ 4ರ ಬೆಳಿಗ್ಗೆ 9ಗಂಟೆಗೆ ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚವ್ಹಾಣ್ರವರು ಮಾಡಲಿದ್ದಾರೆ. ಅತಿಥಿಗಳಾಗಿ ಬಂಜಾರಾ ಯುವನಾಯಕ ಶ್ರೀ ಕೃಷ್ಣಾ ನಾಯಕ್ ಹಾಗೂ ಶ್ರೀ ನರೇಂದ್ರ ರಾಠೋಡ್, ಓಂಪ್ರಕಾಶ್ ಭಾಗವಹಿಸಲಿದ್ದಾರೆ. ಟೂರ್ನಿಮೆಂಟ್ನಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನವಾಗಿ 100000, ದ್ವಿತೀಯ ತಂಡಕ್ಕೆ 50000 ಹಾಗೂ ತೃತೀಯ ತಂಡಕ್ಕೆ 25000 ಬಹುಮಾನ ಸಿಗಲಿದೆ.