Friday, November 22, 2024

ಕೇಂದ್ರದ ಬಜೆಟ್​​​ಗೆ ವಾಣಿಜ್ಯೋದ್ಯಮ ಸಂಘ ಸ್ವಾಗತಾರ್ಹ..!

ಹುಬ್ಬಳ್ಳಿ : ಇಂದು ವಿತ್ತ ಸಚಿವೆ ಮಂಡಿಸಿದ ಬಜೆಟ್​ ಸಮತೋಲನ ಬಜೆಟ್ ಆಗಿದೆ. ಕೇಂದ್ರದ ಬಜೆಟ್​​​ಗೆ ವಾಣಿಜ್ಯೋದ್ಯಮ ಸಂಘ ಸ್ವಾಗತಾರ್ಹ ಕೋರಿದೆ .

ಇಂದು ಹುಬ್ಬಳ್ಳಿಯಲ್ಲಿ  ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ  ವಿನಯ್ ಜವಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ 25 ವರ್ಷದ ದೂರದೃಷ್ಟಿಯಿಂದ ಮಂಡಿಸಿದ ಬಜೆಟ್ ಇದಾಗಿದೆ. ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಹೆಚ್ಚಳ ಮಾಡಿರುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ‌.

ಐದು ನದಿಗಳ ಜೋಡಣೆ-ಡಿಪಿಆರ್ ಸಿದ್ಧಪಡಿಸಲು ಆದ್ಯತೆ  ಖುಷಿಯ ವಿಚಾರ. ಕೊರೋನಾ ಸಂದರ್ಭದಲ್ಲಿ ಆದ ಅರ್ಥಿಕ ಹಿನ್ನಡೆಯನ್ನು ಸರಿದೂಗಿಸುವ ಕೆಲಸ ಮಾಡಿದೆ. ಸಣ್ಣಕೈಗಾರಿಗೆ, ಕೃಷಿ ಕೈಗಾರಿಕೆಗಳಿಗೆ ಉತ್ತೇಜಕ್ಕೆ ಒತ್ತು ನೀಡಲಾಗಿದೆ. ಗಂಗಾ ನದಿ ಪಕ್ಕದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಅವಕಾಶ ನೀಡಿದ್ದು ಖುಷಿಯ ವಿಚಾರ. 3ಕೋಟಿ 80 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ.

ಬಡವರಿಗೆ ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಭೂ ದಾಖಲೆಗಳನ್ನು ಸರಳೀಕರಣ  ಮಾಡಲು ‘ಒಂದು ದೇಶ ಒಂದು ನೋಂದಣಿ’ ಮಾಡಿದ್ದು ಸ್ವಾಗತಾರ್ಹ ಎಂದರು. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಯೋಜನೆಯಡಿ ಶೇಕಡ 60% ರಷ್ಟು ಸ್ಥಳೀಯ ಖರೀದಿಗೆ ಒತ್ತು. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆದ್ರೆ ಆದಾಯ ತೆರಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇತ್ತು. ಆದ್ರೆ ಅದು ಆಗಿಲ್ಲ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES