ಅಗರ್ತಲಾ (ತ್ರಿಪುರ): ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದ ಖಿಲ್ಪಾರಾ ಪ್ರದೇಶದ ಸುಖ್ಸಾಗರ್ ಸರೋವರದ ಪ್ರದೇಶದಿಂದ ನೂರಾರು ವಲಸೆ ಹಕ್ಕಿಗಳ ಮೃತದೇಹಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ. ಕೆರೆಯ ಸಮೀಪ ಪಕ್ಷಿಗಳು ಸತ್ತಿರುವುದು ಕಂಡು ಬಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಘಟನಾ ಸ್ಥಳಕ್ಕೆ ಡಿಎಫ್ಒ ಗೋಮತಿ ಮಹೇಂದ್ರ ಸಿಂಗ್ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಂಗ್ ಅವರು ಈ ಘಟನೆಯ ಕುರಿತಾಗಿ ತನಿಖೆಗೆ ಆದೇಶಿಸಿದ್ದಾರೆ ಹಾಗೂ ಆ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ.