ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳು ಆಗಬಹುದು. ಉಳಿದಿರುವ ನಾಲ್ಕು ಸ್ಥಾನಗಳು ಭರ್ತಿ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಲ ಯಾವುದೇ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಗೆ ಅನ್ಯಾಯ ಆಗುವುದಿಲ್ಲ ಎಂದಿದ್ದಾರೆ.
ಗುಪ್ತ ಸಭೆಗಳ ವಿಚಾರ ಕುರಿತು ಮಾತನಾಡಿದ ಅವರು, ಯಾವುದೂ ಗುಪ್ತ ಸಭೆಗಳಲ್ಲ, ಎಲ್ಲವೂ ಪಕ್ಷದ ಬೆಳವಣಿಗೆಗೆ ಮಾಡಿರುವ ಸಭೆಗಳಷ್ಟೆ. 2023 ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಬೇಕಿದೆ. ಸುಮಾರು 139 ಸೀಟ್ ಗೆಲ್ಲುವಷ್ಟು ಹಾಗೂ ಈಗಿರುವ 25 ಲೋಕಸಭಾ ಸ್ಥಾನಗಳನ್ನ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಭೆಗಳು ಆಗುತ್ತಿವೆ. ಇದರಲ್ಲಿ ಯಾವುದೂ ಪಕ್ಷ ವಿರೋಧಿ, ಹಿನ್ನಡೆ, ಪಕ್ಷಕ್ಕೆ ದ್ರೋಹ ಮಾಡುವಂತಹದ್ದು ಇಲ್ಲ ಎಂದಿದ್ದಾರೆ.