ಧಾರವಾಡ : ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಂತಿರುವ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ಫ್ಯೂ ಹಾಕಿದ್ದೆ ಪಾದಯಾತ್ರೆ ಮಾಡಬಾರದು ಎಂದು ಸರ್ಕಾರದ ವಿರುದ್ದ ಆರೋಪ ಮಾಡಿದ್ದಾರೆ.
ಮಹಾದಾಯಿ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ಅರ್ಧ ಆಗಿದೆ. ಕೊರೊನಾ ಹೆಚ್ಚಳ ಹಿನ್ನೆಲೆ ಪಾದಯಾತ್ರೆ ನಿಲ್ಲಿಸಿದ್ದೇವೆ. ಕಾನೂನಿಗೆ ಗೌರವ ಕೊಟ್ಟು ಜನರ ಹಿತದೃಷ್ಟಿಯಿಂದ ನಿಲ್ಲಿಸಿದ್ದೇವೆ. ಕೊರೊನಾ ಕಡಿಮೆಯಾದ ಮೇಲೆ ಪಾದಯಾತ್ರೆ ಮುಂದುವರೆಯುತ್ತೆ ಎಂದರು.
ಅಲ್ಲದೇ ಸರ್ಕಾರ ಕರ್ಫ್ಯೂ ಹಾಕಿದ್ದ ಉದ್ದೇಶವೇ ಕಾಂಗ್ರೇಸ್ ಪಕ್ಷ ಮಾಡುತ್ತಿದ್ದ ಮೇಕೆದಾಟು ಪಾದಯಾತ್ರೆ ನಿಲ್ಲಿಸಲು, ಪಾದಯಾತ್ರೆ ಮಾಡಬಾರದು ಎನ್ನುವುದೇ ಅವರ ಉದ್ದೇಶವಾಗಿತ್ತು. ಸರ್ಕಾರದಲ್ಲಿ ಕಾಲಕಾಲಕ್ಕೆ ದುಡ್ಡು ಬಿಡುಗಡೆ ಆಗಲ್ಲ.
ಈ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇವರ ಹತ್ತಿರ ದುಡ್ಡಿಲ್ಲ ಹಾಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಸಾಲದ ಮೇಲೆ ಎಷ್ಟು ದಿನ ಸರ್ಕಾರ ನಡೆಸಬಹುದು, ಎದ್ವಾ ತದ್ವಾ ಸಾಲಾ ಮಾಡೋಕೆ ಆಗುತ್ತಾ. ಸಾಲಾ ಮಾಡಿ ಹೋಳಿಗೆ ತಿನ್ನೊಕೆ ಆಗುತ್ತಾ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.