ಬೆಂಗಳೂರು:ಪ್ರಾಪರ್ಟಿ ವಿಚಾರವಾಗಿ ದುಷ್ಕರ್ಮಿಗಳು ಗಲಾಟೆ ಮಾಡಿದರೂ ಕ್ರಮ ಕೈಗೊಳ್ಳದ ಆರೋಪದಿಂದಾಗಿ ಭೂಗಳ್ಳರಿಗೆ ಬೆನ್ನೆಲುಬಾಗಿ ನಿಂತ ಹೆಣ್ಣೂರು ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮೇಲೆ ಗಂಭೀರ ಆರೋಪವನ್ನು ವ್ಯಕ್ತಪಡಿಸಿದ್ದಾರೆ.
40ರೌಡಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದ ಇನ್ಸ್ಪೆಕ್ಟರ್ ದೂರು ನೀಡಲು ಹೋದರೆ ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.ಕೋರ್ಟ್ನಿಂದ ಸ್ಟೇ ತಂದರೂ ಅಕ್ರಮ ಪ್ರವೇಶಕ್ಕೆ ಇನ್ಸ್ಪೆಕ್ಟರ್ ಬೆಂಬಲವನ್ನು ನೀಡಿದ್ದಾರೆ.ವಾಣಿ ಮತ್ತು ವರ್ಲಮತಿ ಎನ್ನುವವರಿಂದ ಆರೋಪ ವ್ಯಕ್ತಪಡಿಸಿದ್ದು,ನಿವೃತ್ತಿ ಯೋಧ ದಿ.ಚಿನ್ನಸ್ವಾಮಿ 1989ರಲ್ಲಿ ಹೆಣ್ಣೂರು ಬಂಡೆ ಬಳಿ ಸೈಟ್ ಖರೀದಿಸಿದ್ದರು.
30*40ಯ ಎರಡು ಸೈಟ್ ಖರೀದಿ ಮಾಡಿದ್ದ ದಿ.ಚಿನ್ನಸ್ವಾಮಿ ನಂತರ ಕಾಂಪೌಂಡ್ ಕೂಡ ನಿರ್ಮಾಣ ಮಾಡಿದ್ದರು.ಅಕ್ರಮವಾಗಿ ಪ್ರವೇಶಿಸಿ ಕಾಂಪೌಂಡ್ ಧ್ವಂಸ ಮಾಡಿದ್ದು,ಕೃಷ್ಣ ಆನಂದನಿಂದ ಅಕ್ರಮ ಪ್ರವೇಶವಾಗಿದೆ ಎಂದು ದೂರು ನೀಡಿದ್ದಾರೆ.ಈ ವೇಳೆ ಮನೆಯಲ್ಲಿದ್ದ ವಸ್ತುಗಳನ್ನು ದರೋಡೆ ಮಾಡಿರುವ ಆರೋಪ ಇದ್ದು ದರೋಡೆ ಕುರಿತು ದೂರು ನೀಡಿದ್ದರೂ ಸ್ವೀಕರಿಸದ ಇನ್ಸ್ಪೆಕ್ಟರ್ ವಸಂತ್ ಕುಮಾರ್ ದೂರು ಸ್ವೀಕರಿಸದೆ ನಮಗೆ ಬೆದರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.