Tuesday, November 5, 2024

ಅನುದಿನ ‘ಸುಂದರ ದಿನ’ವನ್ನಾಗಿಸಿ

ಸೌಂದರ್ಯ ಎನ್ನುವುದು ನೋಡುವವರ ಕಣ್ಣುಗಳಲ್ಲಿದೆ ಎಂಬ ವ್ಯಾಖ್ಯೆಯಿದೆ. ಅಂತೆಯೇ ನಮ್ಮ ಪ್ರತಿ ದಿನವನ್ನು ನಾವು ನೋಡುವ ದೃಷ್ಟಿ ಬದಲಾದರೆ ಬದುಕೇ ಬದಲಾಗುತ್ತದೆ. ಸುಂದರ ಎನ್ನುವ ಪದವೇ ವಿಶಿಷ್ಟವಾಗಿದೆ. ಬದುಕನ್ನು ಸುಂದರವನ್ನಾಗಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾದರೆ ಇಡೀ ಪ್ರಪಂಚವೇ ಸುಂದರವಾಗಿರುತ್ತದೆ.

ಶುಭ ದಿನ’ ಎಂದು ಕರೆಯುವ ಸ್ಥಾನದಲ್ಲಿ ಇನ್ನು ಮುಂದೆ ‘ಸುಂದರ ದಿನ’ ಎಂದು ಕರೆಯುವುದನ್ನು ಅಭ್ಯಾಸ ಆರಂಭಿಸಿ.
ಸುಂದರ ಮುಂಜಾನೆ
• ಸುಂದರ ಮಧ್ಯಾಹ್ನ
• ಸುಂದರ ಸಂಜೆ
• ಸುಂದರ ರಾತ್ರಿ
ಈ ಸಂಬೋಧನೆ ನಿಮ್ಮ ಬದುಕು ಬದಲಿಸಲಿವೆ.

ಮುಂಜಾನೆ ಆಯಾ ದಿನದ ಕೆಲಸ ಕಾರ್ಯಗಳ ಬಗ್ಗೆ ಯೋಜಿಸುವುದು ಒಳ್ಳೆಯದು. ಸಂಜೆ ವೇಳೆ ಆ ಕಾರ್ಯಗಳ ಪ್ರಗತಿಯನ್ನು ಅವಲೋಕಿಸುವುದು ಅಗತ್ಯವಿದೆ.
“ದಿನವ ಬಂಜೆಯ ಮಾಡಬೇಡ” ಎಂದು ಕವಿ ರಾಘವಾಂಕ ಅವರು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ.ಪ್ರತಿ ದಿನವನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಂಡರೆ ಇಡೀ ಬದುಕೇ ನಿಮ್ಮ ಹಿಡಿತಕ್ಕೆ ಸಿಗುತ್ತದೆ ಎನ್ನುವ ವಿಚಾರದಲ್ಲಿ ನಿಮಗೆ ಸಂದೇಹ ಬೇಡ.
ಪ್ರತಿ ನಿತ್ಯ ಬದುಕನ್ನು ಉತ್ಸಾಹಭರಿತರಾಗಿದ್ದುಕೊಂಡು ಉತ್ಸವದಂತೆ ಆಚರಿಸಲು ಇಂದೇ ಆರಂಭಿಸಿ.
ನಿಮಗೆ ಶುಭವಾಗಲಿ.

ಜಯಪ್ರಕಾಶ್ ನಾಗತಿಹಳ್ಳಿ
ಮೆಂಟರ್ ಪವರ್ ಟಿವಿ

RELATED ARTICLES

Related Articles

TRENDING ARTICLES