Monday, November 18, 2024

ದೆಹಲಿಯಲ್ಲಿ ಪ್ರಜ್ವಲಿಸಲಿದೆ ಹುಬ್ಬಳ್ಳಿಯ ಭರತನಾಟ್ಯ

ಹುಬ್ಬಳ್ಳಿ : ಭರತನಾಟ್ಯ, ನೃತ್ಯಪಟುಗಳಿಂದ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುವ ಸದವಕಾಶ ದೊರಕಿದೆ.

ಹುಬ್ಬಳ್ಳಿಯ ಮಯೂರಿ ನೃತ್ಯ ಅಕಾಡೆಮಿಯ 10 ಪಟುಗಳಿಂದ ನೃತ್ಯ ಪ್ರದರ್ಶನವನ್ನು ಮಾಡಲಾಗುತ್ತಿದ್ದು, ಕರ್ನಾಟಕದಿಂದ ಒಟ್ಟು 37 ನೃತ್ಯ ಪಟುಗಳ ನೃತ್ಯ ಪ್ರರ್ಶನ ನಡೆಯಲಿದೆ.ಉಡುಪಿ ಜಿಲ್ಲೆಯ ಉಡುಪಿ ಫೀಟ್ಸ್, ಬೆಂಗಳೂರಿನ ನಾಟ್ಯಶ್ವರ ನೃತ್ಯ ಶಾಲೆ ಹಾಗೂ ಹುಬ್ಬಳ್ಳಿಯ ಮಯೂರಿ ನೃತ್ಯ ಅಕಾಡೆಮಿಯ ಒಟ್ಟು 37 ಪಟುಗಳು ದೇಶದ ವಿವಿಧ ರಾಜ್ಯಗಳ ಒಟ್ಟು 480 ನೃತ್ಯ ಪಟುಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಉಡುಪಿ ತಂಡ ಜನಪದ ನೃತ್ಯ ಪ್ರದರ್ಶನ ಮಾಡಿದರೆ, ಹುಬ್ಬಳ್ಳಿ ತಂಡ ಭರತನಾಟ್ಯ ಪ್ರದರ್ಶನ ಮಾಡಲಿದ್ದಾರೆ. ಕೇಂದ್ರ ಸರ್ಕಾರದಿಂದ 75ನೇ ಗಣರಾಜ್ಯೋತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮ ಆಯೋಜಿನೆ ಮಾಡಲಾಗಿದ್ದು, ನಾಲ್ಕು ಹಂತದಲ್ಲಿ ಸ್ಪರ್ಧೆಗಳನ್ನು ಎದುರಿಸಿ ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗದಿಂದ ಒಟ್ಟು 60 ತಂಡಗಳನ್ನು ಆಯ್ಕೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES