ದಾವಣಿಗೆರೆ : ಶಬರಿಮಲೆಗೆ ಹೋಗಿದ್ದ 31 ಜನರಿಗೆ ಕೋರೋನಾ ಕಂಡುಬಂದ ಹಿನ್ನಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಗೆ ಜನರಿಗೆ ಆತಂಕ ಕಂಡುಬಂದಿದೆ.
ಆಂಜನೇಯನಗರದಿಂದ ಶಬರಿಮಲೆಗೆ ಹೋಗಿದ್ದ 65 ಜನರ ತಂಡ ಶಬರಿಮಲೆಗೆ ಹೋಗುವಾಗ ನೆಗೆಟಿವ್ ರಿಪೋರ್ಟ್ನೊಂದಿಗೆ ಹೋಗಿದ್ದರು. ಅದರೆ ವಾಪಸ್ ಬಂದ ತಕ್ಷಣ ಸ್ವ್ಯಾಬ್ ಟೆಸ್ಟ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ 65 ಜನರ ಪೈಕಿ 31 ಜನರಿಗೆ ಕೊರೋನಾ ಪಾಸಿಟಿವ್ ಕಂಡುಬಂತು.ಸೋಂಕಿತ 31 ಜನರರಿಗೆ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಶಬರಿಮಲೆಗೆ ಹೋಗಿ ಬಂದ ಎಲ್ಲರಿಗೂ ನಿರಂತರ ತಪಾಸಣೆ ಮಾಡಲಾಗುತ್ತದೆ.