Monday, November 25, 2024

ಒಟಿಟಿಯಲ್ಲಿ ಇಂದು ಅದ್ಭುತ ಚಿತ್ರಗಳು ಬಿಡುಗಡೆ

ಶುಕ್ರವಾರ ಬಂತೆಂದರೆ ಸಾಕು ಹೊಸ ಹೊಸ ಚಲನ ಚಿತ್ರಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿ ಬಳಗ ಕಾಯುತ್ತಾ ಇರುತ್ತಾರೆ.ಆದರೆ ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಸಿನೆಮಾ ಪ್ರಿಯರು ಚಿತ್ರಮಂದಿರಕ್ಕೆ ಬರುವುದು ತುಂಬಾನೇ ಕಡಿಮೆಯಾಗಿದೆ.ಆದರೆ ಅದಕ್ಕಂತಲೇ ಒಟಿಟಿ ಮಾಧ್ಯಮದಲ್ಲಿ ಪ್ರತಿ ಶುಕ್ರವಾರ ಬಿಡುಗಡೆಯಾಗುವ ಹೊಸ ಚಲನಚಿತ್ರಗಳನ್ನು ನಾವು ಮನೆಯಲ್ಲೇ ಕುಳಿತುಕೊಂಡು ವೀಕ್ಷಿಸಬಹುದು .ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇರಾನಿನ ಚಿತ್ರ ಎ ಹಿರೋದಿಂದ ಹಿಡಿದು ಜೀ 5ನ ಎಲ್ಲಾ ಚಿತ್ರಗಳು ಶುಕ್ರವಾರದಂದು ಬಿಡುಗಡೆಯಾಗಲಿದೆ.

1. 36 ಫಾರ್ಮ್​ ಹೌಸ್ :
ರೋಮಾಂಚನಕಾರಿ ಕಥೆ ಇರುವ ಚಿತ್ರವನ್ನು ನೋಡಲೇಬೇಕಾದರೆ 36 36 ಫಾರ್ಮ್​ ಹೌಸ್ ಖಂಡಿತವಾಗಿಯೂ ನೋಡಬಹುದು.ಈ ಚಿತ್ರದಲ್ಲಿ ಒಬ್ಬ ಮಗ ಮತ್ತು ತಂದೆ ಇಂದು ಮೂಲ ಉದ್ದೇಶಗಳೊಂದಿಗೆ ತೋಟದ ಮನೆಗೆ ಪ್ರವೇಶಿಸುತ್ತಾರೆ.ಅವರು ಆ ಮನೆಯನ್ನು ಪ್ರವೇಶಿಸಿದ ನಂತರ ಏನೆಲ್ಲಾ ಆಗುತ್ತದೆ ಎಂದು ಈ ಚಿತ್ರದಲ್ಲಿ ತೋರಿಸಿದ್ದಾರೆ.ಇದರಲ್ಲಿ ಅಮೋಲ್ ಪರಾಶರ್,ಸಂಜಯ್ ಮಿಶ್ರಾ,ಫ್ಲೋರಾ ಸೈನಿ,ಬರ್ಖಾ ಸಿಂಗ್ ಮತ್ತು ವಿಜಯ್ ರಾಜ್ ನಟಿಸಿದ್ದಾರೆ.

2. ಎ ಹಿರೋ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ವಾರ ಇರಾನಿನ ಚಿತ್ರವಾದ ಎ ಹೀರೋ ಬಿಡುಗಡೆಯಾಗಲಿದೆ. ಸಾಲ ಪಾವತಿಸದ ಕಾರಣ ಜೈಲಿನಲ್ಲಿರುವ ರಹೀಮ್ ಎಂಬ ಖೈದಿಯ ಸುತ್ತ ಈ ಚಲನಚಿತ್ರದ ಕಥೆಯನ್ನು ಬರೆಯಲಾಗಿದೆ.ಅವನು ದೂರನ್ನು ಹಿಂದೆಗೆದುಕೊಳ್ಳಲು ತನಗೆ ಸಾಲ ನೀಡಿದವನ್ನು ಕೇಳುತ್ತಾನೆ. ಆದರೆ ಅವನು ಯೋಜಿಸಿದಂತೆ ಯಾವುದೂ ನಡೆಯುದಿಲ್ಲ .

3. ಓಜಾರ್ಕ್​ ನೆಟ್​ ಫ್ಲಿಕ್ಸ್
ಈ ಚಿತ್ರವನ್ನು 7 ಕಂತುಗಳನ್ನು ಒಳಗೊಂಡ 2 ಭಾಗಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಓಜಾರ್ಕ್​ ಪ್ರಸ್ತುತ ದಿನದಲ್ಲಿ ನಡೆಯುವ ರೋಮಾಂಚಕ ಕಥೆಯನ್ನು ಹೊಂದಿದ್ದು,ಬಿರ್ಡೆ ಕುಟುಮಬದ ಸದಸ್ಯರು ಚಿಕಾಗೋ ಜೀವನದಿಂದ ಮಸ್ಸೌರಿಯ ಓಜಾರ್ಕ್ಸ್ ಸರೋವರದಲ್ಲಿ ಅಪಾಯಕಾರಿ ಕ್ರಿಮಿನಲ್ ಜೀವನಕ್ಕೆ ಹೇಗೆ ಬದಲಾಗುತ್ತದೆ.ಎಂದು ಈ ಚಿತ್ರದಲ್ಲಿ ತೋರಿಸಿದ್ದಾರೆ.

4. ಬ್ರಾಹ್ಮ್ಸ್ ದಿ ಬಾಯ್ 2 ಬುಕ್ ಮೈ ಶೋ ಸ್ಟ್ರೀಮ್
ವಿಲಿಯಂ ಬ್ರೆಂಟ್ ಬೆಲ್ ನಿದೇರ್ಶನದ ಮತ್ತು ಕೇಟೀ ಹೋಮ್ಸ್ , ಕ್ರಿಸ್ಟೋಫರ್ ಕಾನ್ವೆರಿ,ಓವೈನ್ ಯೆಮನ್,ರಾಲ್ಫ್ ಇನೆಸ್ಸನ್ ಅಭಿನಯಿಸಿರುವ ಈ ಚಿತ್ರವು ತುಂಬಾನೇ ಭಯಾನಕ ಚಲನಚಿತ್ರವಾಗಿದ್ದು ಈ ವಾರದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.ಈ ಚಿತ್ರದಲ್ಲಿ ಒಂದು ಕುಟುಂಬವು ಹಿಲ್ಟೈಯರ್ ಮ್ಯಾನ್ಷನ್​ಗೆ ಹೋಗುತ್ತದೆ ಮತ್ತು ಶೀಘ್ರದಲ್ಲಿಯೇ ಅವರ ಮಗ ಜೂಡ್ ಬ್ರಾಹ್ಮ್ಸ್ ಎಂಬ ಪಿಂಗಾಣಿ ಬೊಂಬೆಯೊಂದಿಗೆ ಸ್ನೇಹ ಬೆಳೆಸುತ್ತಾನೆ.ಹೀಗೆ ಈ ಚಿತ್ರ ಮುಂದುವರೆಯುತ್ತಾ ಹೋಗುತ್ತದೆ.

5. ಪ್ರೊಟೇಜ್ ಲಯನ್ಸ್ ಗೇಟ್ ಪ್ಲೇ
ಪ್ರೊಟೇಜ್ ಚಿತ್ರವು ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಮೈಕಲ್ ಕೀಟನ್ ಮ್ಯಾಗಿ ಕ್ಯೂ ಮತ್ತು ಸ್ಯಾಮ್ಯುಯೆಲ್ ಎಲ್ . ಜಾಕ್ಸನ್ ನಟಿಸಿದ್ದಾರೆ. ಈ ಚಿತ್ರವನ್ನು ಮಾರ್ಟಿನ್ ಕ್ಯಾಂಪ್​ಬೆಲ್​ ನಿದೇರ್ಶಿಸಿದ್ದಾರೆ.ಈ ಚಿತ್ರವು ಕೊಲೆಗಾರನ ಜೀವನದ ಕಥೆಯಾಗಿದೆ.ಗುತ್ತಿಗೆ ಕೊಲೆಗಾರಳು ಚಿಕ್ಕ ಮಗುವಾಗಿದ್ದಾಗ ಅವಳನ್ನು ರಕ್ಷಿಸಿದ ಮಾರ್ಗದರ್ಶಕನನ್ನು ಕ್ರೂರವಾಗಿ ಕೊಲೆ ಮಾಡಲಾಗುತ್ತದೆ.ಅವಲ ಮಾರ್ಗದರ್ಶಕನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ಕಥೆ ಈ ಚಿತ್ರದಲ್ಲಿದೆ.

6. ಮ್ಯೂನಿಚ್:ದ ಎಡ್ಜ್ ಆಫ್ ವಾರ್
ರಾಬರ್ಟ್​ ಹ್ಯಾರಿಸ್ ಅವರ ಅದೇ ಹೆಸರಿನ ರಾಜಕೀಯ ಕಾದಂವರಿಯನ್ನು ಆದರಿಸಿ ಈ ಚಲನಚಿತ್ರವನ್ನು ಮಾಡಲಾಗಿದೆ.ಈ ಚಿತ್ರವನ್ನು 1938ರಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಕೊಂಡು ಮಾಡಲಾಗಿದೆ.ಎಂದು ಹೇಳಲಾಗುತ್ತಿದೆ. ನೆವಿಲ್ಲೇ ಚೇಂರ್ಬನ್​ನ ಸರ್ಕಾರವು ಶಾಂತಿಯುತ ಪರಿಹಾರ ಕಂಡುಕೊಳ್ಳಲು ನೋಡುತ್ತಿದ್ದಾಗ ಹಿಟ್ಟರ್ ಜೊಕೊಸ್ಲೊವಾಕಿಯಾವನ್ನು ಆಕ್ರಮಿಸಲು ಸಿದ್ದನಾಗುತ್ತಾನೆ.ಆಗಲೇ ಒಬ್ಬ ಬ್ರಿಟೀಶ್ ರಾಜಕಅರಣಿಯನ್ನು ತನ್ನ ಹಳೆಯ ಆಕ್ಸ್​ಫರ್ಡ್​ ಸಹಪಾಠಿಯಿಂದ ಗೌಪ್ಯ ದಾಖಲೆಯನ್ನು ಪಡೆಯುವ ಕಾರ್ಯಾಚರಣೆಗೆ ಕಳುಹಿಸಲಾಗುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಈ ಚಿತ್ರವನ್ನು ನೀವು ವೀಕ್ಷಿಸಲೇಬೇಕು.

7.ಆ್ಯಸ್ ವಿ ಸೀ ಇಟ್
ಜ್ಯಾಕ್ ಹ್ಯಾರಿಸನ್ ಮತ್ತು ವೈಲೆಟ್ ಎಂಬ ಮೂವರು ಒಂದೇ ರೂಮ್​ ಮೇಟ್​ಗಳಾಗಿರುತ್ತಾರೆ.ಇದರಲ್ಲಿ ತಮ್ಮ ಜೀವನದ ಹಾದಿಯಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳುವ ಕಥೆಯನ್ನು ಹೊಂದಿದ್ದು ಇಂದು ಅಮೆಜಾನ್ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

RELATED ARTICLES

Related Articles

TRENDING ARTICLES