ಪೋರ್ಚುಗಲ್: ಪೋರ್ಚುಗಲ್ ಇಂಟರ್ನ್ಯಾಷನಲ್ ಯುನೈಟೆಡ್ ಕ್ಲಬ್ ಅಗ್ರ 4 ಶ್ರೇಯಾಂಕಗಳಲ್ಲಿ ಒಳಗೊಳ್ಳದಿದ್ದರೆ ವಿಶ್ವದ ಅಗ್ರಮಾನ್ಯ ಫುಟ್ಬಾಲ್ ಆಟಗಾರ ರೊನಾಲ್ಡೊ ಕ್ಲಬ್ ತ್ಯಜಿಸುವ ಸಾಧ್ಯತೆಯಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ ಎಂದು ದಿ ಸನ್ ವರದಿ ಮಾಡಿದೆ.
ಆಗಸ್ಟ್ನಲ್ಲಿ ಕ್ಲಬ್ನ ಜೊತೆ ರೊನಾಲ್ಡೊ ಎರಡು ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿ ಕ್ಲಬ್ನ ಶ್ರೇಯಾಂಕದ ಬಗ್ಗೆ ನಮಗೆ ಕಾಳಜಿಯಿದೆ ಎಂದು ವಕ್ತಾರರು ಹೇಳಿಕೆ ನೀಡಿದ್ದಾರೆ. ಕ್ರಿಶ್ಚಿಯಾನೊ ರೊನಾಲ್ಡೊ ಪೊರ್ಚುಗಲ್ನ ಜಗತ್ಪ್ರಸಿದ್ಧ ಆಟಗಾರನಾಗಿರುವುದರಿಂದ ಅವರನ್ನು ಪಡೆಯಲು ಕ್ಲಬ್ಗಳು ಪೈಪೋಟಿ ನಡೆಸುತ್ತವೆ.