ವಿರಾಟ್ ಕೊಹ್ಲಿ ಅವರು ನಾಯಕತ್ವವನ್ನು ತ್ಯಜಿಸಿರುವುದು ಅವರು ಉತ್ತಮ ಆಟಗಾರನಾಗಿ ಮತ್ತೊಮ್ಮೆ ಹೊರಹೊಮ್ಮಲು ಹಾಗೂ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಾಲ ಕಳೆಯಲು ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‍ನ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ. ನಾಯಕತ್ವದ ಹೊಣೆಯಿದ್ದರೆ ಹೆಚ್ಚು ಕಾಲ ಕುಟುಂಬದೊಂದಿಗೆ ಇರಲು ಸಾಧ್ಯವಿಲ್ಲ. ಜೊತೆಗೆ ಅನೇಕ ಜವಾಬ್ದಾರಿಗಳಿರುತ್ತದೆ. ಅದಕ್ಕಾಗಿ ನಾಯಕತ್ವವನ್ನು ತ್ಯಜಿಸಿದ್ದಾರೆ ಎಂದು ಹೇಳಿದರು.
ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸುವ ವಿಚಾರವನ್ನು ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ಘೋಷಿಸಿದ್ದಾರೆ.”ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಇದು 7 ವರ್ಷಗಳ ಕಠಿಣ ಪರಿಶ್ರಮ, ಶ್ರಮ ಮತ್ತು ನಿರಂತರ ಪರಿಶ್ರಮದ ದಿನವಾಗಿದೆ. ನಾನು ಆ ಕೆಲಸವನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ ಮತ್ತು ಅಲ್ಲಿ ಏನನ್ನೂ ಬಿಡಲಿಲ್ಲ. ಪ್ರತಿಯೊಂದೂ ಒಂದು ಹಂತದಲ್ಲಿ ಕೊನೆಗೊಳ್ಳಬೇಕು ಮತ್ತು ಹಾಗಾಗಿ ಅದು ಭಾರತದ ಟೆಸ್ಟ್ ನಾಯಕನಾಗಿ ಕೊನೆಗೊಳ್ಳಬೇಕಾಗಿದೆ ಎಂದು ಹೇಳಿದ್ದರು.