Tuesday, December 24, 2024

ನಾಯಿಗಳ ರಕ್ಷಣೆಗೆ ಮಾಲೀಕರ ಪರದಾಟ

ಶ್ವಾನಗಳು ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ ಜಗತ್ತಿನ ಎಲ್ಲಾ ಪ್ರಾಣಿ ಸಂಕುಲದಲ್ಲಿ ಮಾನವನ ಭಾವನೆಗಳಿಗೆ ತಕ್ಷಣ ಸ್ಪಂದಿಸುವ ಪ್ರಾಣಿ ಅಂದ್ರೆ ಅದು ನಾಯಿಗಳು ಮಾತ್ರ, ತನ್ನ ಮಾಲೀಕ ನೀಡುವ ಆದೇಶವನ್ನ ಚಾಚು ತಪ್ಪದೇ ಪಾಲಿಸುವ ನಾಯಿಗಳು, ತಮ್ಮ ಮಾಲೀಕನಿಗೆ ಏನಾದರು ತೊಂದರೆಯಾದರೆ ಆತನನ್ನ ರಕ್ಷಿಸೋದಕೆ ತಾನೇ ಮೊದಲು ಬಂದು ನಿಲ್ಲುತ್ತವೆ. ಹಾಗಾಗಿಯೇ ಶ್ವಾನಗಳನ್ನ ನಿಯತ್ತಿನ ಪ್ರಾಣಿ ಅಂತ ಕರೆಯಲಾಗುತ್ತದೆ. ಹೀಗಾಗಿ ಇವತ್ತು ಜಗತ್ತಿನಲ್ಲಿ ಶೇ33 ರಷ್ಟು ಜನ ನಾಯಿಗಳನ್ನ ಸಾಕುತ್ತಿದ್ದಾರೆ. ಜೊತೆಗೆ ಅವುಗಳ ಆರೈಕೆ ಪಾಲನೆಯ್ಲಲಿ ಸಾಮಾನ್ಯ ಜನರು ಕೂಡ ಹೆಚ್ಚಿನ ಉತ್ಸಾಹವನ್ನ ತೋರಿಸುತ್ತಾರೆ.

ಇವತ್ತು ಜಾಗತಿಕವಾಗಿ ಸುಮಾರು 90 ಕೋಟಿ ಶ್ವಾನಗಳಿದ್ದು, ಜಗತ್ತಿನಲ್ಲಿ ಶ್ವಾನಗಳ ರಕ್ಷಣೆಗೆಂದೆ ಸುಮಾರು 1 ಲಕ್ಷಕ್ಕೂ ಅಧಿಕ ಸಂಘಟನೆಗಳಿವೆ ಅಂತ ಹೇಳಲಾಗ್ತಾ ಇದೆ. ಸಾಕಷ್ಟು ಜನಕ್ಕೆ ಯಾಕೆ ನಾಯಿಗಳ ರಕ್ಷಣೆಗೆ ಇಷ್ಟೊಂದು ಸಂಘಟನೆ ಇದೆ ಅನುಮಾನ ಕಾಡಬಹುದು. ಅದಕ್ಕೆ ಪ್ರಮುಖವಾದ ಕಾರಣ ಅಂದ್ರೆ ನಾವು ಮೊದಲೇ ಹೇಳಿದಂತೆ ನಾಯಿಗಳ ವರ್ತನೆ ಹಾಗು ಅವು ಮಾನವನ ಭಾವನೆಗೆ ಸ್ಪಂದಿಸುವ ರೀತಿ. ಈ ಬಗ್ಗೆ ಹಿಂದಿನಿಂದಲೂ ಸಾಕಷ್ಟು ವರದಿಗಳು ಬಂದಿದ್ದು, ನಾಯಿಗಳು ಮಾನವನಿಗೆ ವಿಧೇಯವಾಗಿರುವ ರೀತಿಯಿಂದಾಗಿ ಶ್ವಾನಗಳಿಗೆ ಮಾನವ ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನ ನೀಡಲಾಗಿದೆ. ಅವುಗಳಲ್ಲಿ ಪೊಲೀಸ್, ಸೇನೆ, ಬಾಂಬ್ ಸ್ಕ್ವಾಡ್  ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನ ನೀಡಲಾಗುತ್ತದೆ. ಹೀಗಾಗಿ ಮಾನವ ಸಂಕುಲದಲ್ಲಿ ಶ್ವಾನಗಳಿಗೆ ಮಹತ್ವವಾದ ಸ್ಥಾನವನ್ನ ನೀಡಲಾಗಿದೆ.

ಅದರಲ್ಲೂ ಅಮೆರಿಕನ್ನರಿಗಂತೂ ಶ್ವಾನಗಳು ಅಂದ್ರೆ ಸಾಕಷ್ಟು ಅಚ್ಚುಮೆಚ್ಚು. ಅಮೆರಿಕದಲ್ಲಿ ಶೇ.40ರಷ್ಟು ಜನ ನಾಯಿಗಳನ್ನ ಸಾಕುತ್ತಿದ್ದು, ಅವರಲ್ಲಿ ಬಹುತೇಕರು ಶ್ವಾನಗಳನ್ನ ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಅಮೆರಿಕದಲ್ಲಿ ಜಗತ್ತಿನ ಅತ್ಯಂತ ಬೇಡಿಕೆಯ ತಳಿಯಿರುವ ಶ್ವಾನಗಳನ್ನ ಹೆಚ್ಚು ಸಾಕಲಾಗುತ್ತದೆ. ಹೀಗೆ ಸಾಕಲ್ಪಡುವ ಶ್ವಾನಗಳ ಆರೈಕೆಗೆ ಅಲ್ಲಿನ ಮಾಲೀಕರು ಲಕ್ಷಗಟ್ಟಲೇ ಖರ್ಚು ಮಾಡುವುದು ಕೂಡ ಉಂಟು, ಹಾಗಾಗಿ ಕೆಲ ಪ್ರತಿಷ್ಠಿತ ತಳಿಗಳ ನಾಯಿಗಳಿಗೆ ಅಮೆರಿಕದಲ್ಲಿ ಸಖತ್​ ಬೇಡಿಕೆಯಿದೆ. ಅದರಲ್ಲೂ ಲೇಬ್ರಾಡರ್​ ರಿಟ್ರೀವರ್​​, ಫ್ರೆಂಚ್​ ಬುಲ್​ಡಾಗ್​, ಜರ್ಮನ್​ ಶೆಪರ್ಡ್​, ಗೋಲ್ಡ್​ ರಿಟ್ರೀವರ್​ ಸೇರಿದ ಹಾಗೆ ಹಲವು ಶ್ವಾನಗಳ ಬೆಲೆ ಲಕ್ಷಗಟ್ಟಲೇ ಇದ್ದು, ಇವುಗಳ ಸಾಕುವಿಕೆಗೆ ಅಮೆರಿಕನ್ನ ಮುಗಿ ಬೀಳ್ತಾರೆ. ಅದ್ರಲ್ಲೂ ಫ್ರೆಂಚ್​ ಬುಲ್​ಡಾಗ್​ ಬಗ್ಗೆ ಅಮೆರಿಕನ್ನರು ವಿಶೇಷ ಪ್ರೀತಿ ಹೊಂದಿದ್ದು, ಹೆಚ್ಚಿನ ಅಮೆರಿಕನ್ಸ್​ ಈ ಶ್ವಾನವನ್ನೇ ಖರಿದಿಸೋದಕ್ಕೆ ಹೆಚ್ಚಾಗಿ ಮುಂದಾಗ್ತಾರೆ. ಆದ್ರೆ ಇದೀಗ ಇದೇ ಫ್ರೆಂಚ್​​ ಬುಲ್​ಡಾಗ್​ ನಾಯಿಗಳಿಗೆ ಕಳ್ಳರ ಭೀತಿ ಎದುರಾಗಿದೆ.

ನ್ಯೂಯಾರ್ಕ್‌ನಿಂದ ಲಾಸ್ ಏಂಜಲೀಸ್‌ವರೆಗೆ ಮತ್ತು ಮಿಯಾಮಿಯಿಂದ ಚಿಕಾಗೋವರೆಗೆ ಅತ್ಯಂತ ಬೆಲೆಬಾಳುವ ಈ ತಳಿಯ ಶ್ವಾನಗಳ ಕಳ್ಳತನಗಳು ಹೆಚ್ಚಗ್ತಾ ಇದೆ. ಪುಟ್ಟದಾದ ಮತ್ತು ಸ್ನೇಹಶೀಲವಾಗಿರುವ ಫ್ರೆಂಚ್ ಬುಲ್​ಡಾಗ್​ ಸದ್ಯದ ಮಟ್ಟಿಗೆ ಯುಎಸ್​ಎಯಲ್ಲಿ ಭಾರೀ ಜನಪ್ರಿಯವಾಗಿದ್ದು, ಈ ಶ್ವಾನಗಳು ಕಾಳ ಸಂತೆಯಲ್ಲಿ ಸಾವಿರಾರು ಡಾಲರ್‌ಗಳಿಗೆ ಮಾರಾಟವಾಗುತ್ತಿವೆ. ಹಾಗಾಗಿ ಯಾರ ಮನೆಯಲ್ಲಿ ಹೆಚ್ಚಾಗಿ ಈ ಫ್ರೆಂಚ್​ಬುಲ್​ಡಾಗ್​ಗಳನ್ನ ಸಾಕುತ್ತಾರೊ ಅಂತವರ ಮನೆಗಳನ್ನ ಹುಡುಕಿ ನಾಯಿಗಳನ್ನ ಕದಿಯುತ್ತಿದ್ದಾರೆ. ಇದರಿಂದ ಹೆಚ್ಚು ಆತಂಕಕ್ಕೆ ಒಳಗಾಗಿರುವ ಅಮೆಕದ ಶ್ವಾನ ಪ್ರಿಯರು ನಾಯಿಗಳ ರಕ್ಷಣೆಗೆ ಹೊಸ ತಂತ್ರಗಳನ್ನ ಅಳವಡಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಅಮೆರಿಕದಲ್ಲಿ ಶ್ವಾನಗಳ ಕಳ್ಳತನದ ಪ್ರಕರಣ ಹೆಚ್ಚಾಗ್ತಾ ಇದ್ದು, ಅದರಲ್ಲೂ ಹೆಚ್ಚು ಫ್ರೆಂಚ್​​ ಬುಲ್​ಡಾಗ್​ಗಳ ಕಳ್ಳತನ ಅಮೆರಿಕನ್​ ಪೊಲೀಸರ ನಿದ್ದೆಗೆಡಿಸಿದೆ. ಇದುವರೆಗೆ ಸಾಕಷ್ಟು ಫ್ರೆಂಚ್​ ಬುಲ್​ಡಾಗ್​ ಕಳ್ಳತನದ ಪ್ರಕರಣಗಳ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಕ್ಯಾಲಿಫೋರ್ನಿಯದ ಪೊಲೀಸ್​ ಇಲಾಖೆ ಯಾವುದೇ ಅಂಕಿ ಅಂಶಗಳನ್ನ ಬಿಡುಗಡೆ ಮಾಡಿಲ್ಲ. ಸದ್ಯದ ಮಟ್ಟಿಗೆ ಈ ಬಗ್ಗೆ ಅಲ್ಲಿನ ಪೊಲೀಸರು ಹೆಚ್ಚು ಜಾಗೃತೆ ವಹಿಸಿಕೊಂಡಿದ್ದು, ಈ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ. ಹೀಗಾಗಿ ಕ್ಯಾಲಿಫೋರ್ನಿಯದ ಹಚ್ಚಿನ ಜನರು ತಮ್ಮ ಶ್ವಾನಗಳನ್ನ ಗೂಡುಗಳಲ್ಲಿ ಇಡದೆ ಮನೆಯೊಳಗೆ ಬಿಟ್ಟುಕೊಳ್ಳುತ್ತಿದ್ದಾರೆ ಅನ್ನೋ ವರದಿಗಳು ಕೂಡ ದಾಖಲಾಗ್ತಾ ಇದೆ.

ಒಟ್ಟಾರೆಯಾಗಿ ಕ್ಯಾಲಿಫೋರ್ನಿಯದ ಶ್ವಾನ ಪ್ರಿಯರಿಗೆ ತಮ್ಮ ನಾಯಿಗಳನ್ನ ರಕ್ಷಿಸಿಕೊಳ್ಳೋದೇ ದೊಡ್ಡ ಟಾಸ್ಕ್ ಆಗಿದ್ದು, ಈ ಬಗ್ಗೆ ಅಲ್ಲಿನ ಜನ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಈಗಾಗ್ಲೆ ಈ ಭಾಗದಲ್ಲಿ ಫ್ರೆಂಚ್​ ಬುಲ್​ಡಾಗ್​ ಸಾಕುವವರ ಸಂಖ್ಯೆ ಹೆಚ್ಚಾಗಿದ್ದು, ಒಂದು ವೇಳೆ ತಮ್ಮ ಶ್ವಾನಗಳನ್ನ ಕಂಡು ಹಿಡಿಯದೇ ಇದ್ರೆ. ತಾವು ಪ್ರತಿಭಟನೆ ಮಾಡುವುದಾಗಿ ಅಲ್ಲಿನ ಸ್ಥಳೀಯರು ಎಚ್ಚರಿಕೆಯನ್ನ ನೀಡ್ತಾ ಇದ್ದಾರೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES