Friday, November 22, 2024

ರಾಜಧಾನಿ ಪೊಲೀಸರಲ್ಲಿ ಹೆಚ್ಚಾದ ಕೊರೊನಾ ಸೊಂಕು

ಬೆಂಗಳೂರು:ಇದುವರೆಗೂ ನಗರದಲ್ಲಿ 738 ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಕೊರೊನಾ ಸೊಂಕು ದೃಡಪಟ್ಟಿದ್ದು.ಇದರ ಬೆನ್ನಲ್ಲೇ ಸಿಬ್ಬಂದಿಗಳಿಗೆ ಇನ್ನಷ್ಟು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಪೊಲೀಸ್  ಕಮಿಷನರ್ ಸೂಚನೆಯನ್ನು ನೀಡಿದ್ದಾರೆ.

ಸ್ಟೇಷನ್ ಬಿಟ್ಟು ಹೊರಗೆ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳ ಟೆಸ್ಟ್ ಹೆಚ್ಚಳ ಮಾಡುವಂತೆಯೂ ಸಲಹೆ ನೀಡಿದ್ದು,ಆಯಾ ಠಾಣೆಗಳಲ್ಲಿ ಗರ್ಭಿಣಿ ಮಹಿಳಾ ಸಿಬ್ಬಂದಿಗಳಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿದರೆ ಕೆಲಸಕ್ಕೆ ಬರದೆ ಮನೆಯಲ್ಲಿರುವಂತೆ ಸೂಚಿಸಿದ್ದಾರೆ. ಆಯಾ ವಿಭಾಗದ ಡಿಸಿಪಿಗಳು ಮತ್ತು ಇನ್ಸ್ ಪೆಕ್ಟರ್ ಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚಿಸಿದ್ದಾರೆ.ಇದಲ್ಲದೆ ಹಿರಿಯ ಎಎಸ್ಐ ಸಿಬ್ಬಂದಿಗಳೂ ಸಹ ಸ್ಟೇಷನ್​ನಲ್ಲೇ ಕಾರ್ಯನಿರ್ವಹಿಸಲು ಸಲಹೆ ಸೂಚಿಸಿದ್ದಾರೆ.

ಹೊಯ್ಸಳ ರೌಂಡ್ಸ್ ಮತ್ತು ಚೀತಾ ಗಸ್ತು ಎಲ್ಲಾ ಹಿರಿಯ ಸಿಬ್ಬಂದಿಗಳನ್ನ ಹೊರತುಪಡಿಸಿ ಯುವ ಸಿಬ್ಬಂದಿ ತೆರಳಲು ಸೂಚಿಸಿದ್ದಾರೆ.ಸ್ಟೇಷನ್ ನಲ್ಲಿ , ವಾಹನಗಳಿಗೆ ಪ್ರತಿ ನಿತ್ಯ ಎರಡು ಬಾರಿ ಸ್ಯಾನಿಟೈಸ್ ಮತ್ತು ಸಿಬ್ಬಂದಿಗೆ ಫೇಸ್ ಶೀಲ್ಡ್ ಮಾಸ್ಕ್ ಕಡ್ಡಾಯಗೊಳಿಸಿದ್ದು,  ಸಿಬ್ಬಂದಿಗಳಲ್ಲಿ ಸೊಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಟೆಸ್ಟ್ ಮತ್ತು ಚಿಕಿತ್ಸೆಗೆ ಸಲಹೆಯನ್ನು ನೀಡಿದ್ದಾರೆ.ಸೊಂಕಿತ ಸಿಬ್ಬಂದಿಯ ಆರೋಗ್ಯ ಮತ್ತು ಅವರ ಕುಟುಂಬದ ಯೋಗಕ್ಷೇಮವೂ ವಿಚಾರಿಸಲು ಇನ್ಸ್ ಪೆಕ್ಟರ್ ಮತ್ತು ಡಿಸಿಪಿ ಕಮಿಷನರ್​ಗಳಿಗೆ ಸೂಚಿಸಿದ್ದಾರೆ.ತನಿಖೆ ಸಲುವಾಗಿ ಸಿಬ್ಬಂದಿಗಳು ಹೊರ ರಾಜ್ಯಕ್ಕೆ ಹೋಗುವುದು ಬೇಡ ಆರೋಗ್ಯದ ಎಚ್ಚರಿಕೆ ಜೊತೆಗೆ ಪರಿಸ್ಥಿತಿಯ ಕಾರ್ಯ ನಿರ್ವಹಣೆ ಮಾಡುವಂತೆ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES