ಸೆಟ್ಟೇರಿದಲ್ಲಿಂದ ಸಖತ್ ಸೌಂಡ್ ಮಾಡಿದ್ದ ‘ಕೆಜಿಎಫ್’ ರಿಲೀಸ್ ಗೆ ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿ ಇವೆ ಎನ್ನುವಷ್ಟರಲ್ಲಿ ಯಶ್ ಫ್ಯಾನ್ಸ್ ಮತ್ತು ಕೆಜಿಎಫ್ ಚಿತ್ರತಂಡಕ್ಕೆ ಬಿಗ್ ಶಾಕ್ ಹೊಡೆದಿದೆ.
ಬೆಂಗಳೂರಿನ 10ನೇ ಸಿಟಿ ಸಿವಿಲ್ ಕೋರ್ಟ್ ಕೆಜಿಎಫ್ ರಿಲೀಸ್ ಗೆ ಮಧ್ಯಂತರ ತಡೆ ನೀಡಿದೆ. ರೌಡಿ ತಂಗಂ ಜೀವನಾಧಾರಿತ ಸಿನಿಮಾವಾಗಿದ್ದು, ಈ ಕಥೆಯ ಹಕ್ಕು ತನ್ನ ಬಳಿ ಇದೆ ಅಂತ ವೆಂಕಟೇಶ್ ಎಂಬುವವರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಜನವರಿ 7ರವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಿದೆ.
ಇಷ್ಟಾದರೂ ಚಿತ್ರವನ್ನು ನಾಳೆಯೇ ರಿಲೀಸ್ ಮಾಡುವ ಉತ್ಸಾಹದಲ್ಲಿ ಚಿತ್ರತಂಡ ಇದೆ. ಈ ಹಿಂದೆ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅಭಿನಯದ ಅಂಜನೀಪುತ್ರ ಗೂ ಇದೇ ರೀತಿ ತಡೆ ನೀಡಲಾಗಿತ್ತು. ಆದರೆ, ಆ ಸಿನಿಮಾ ನಿಗಧಿತ ಸಮಯದಲ್ಲಿ ಬಿಡುಗಡೆ ಆಗಿತ್ತು.
ಕಡೇ ಕ್ಷಣದಲ್ಲಿ ಕೆಜಿಎಫ್ ರಿಲೀಸ್ಗೆ ಅಡ್ಡಿಪಡಿಸಿರುವುದರ ಹಿಂದಿನ ಉದ್ದೇಶ ಏನು ಅನ್ನೋದು ಈಗಿನ ಪ್ರಶ್ನೆ. ಮೊದಲೇ ಕೆಜಿಎಫ್ ಹೆಸರು, ಚಿತ್ರಕತೆ ಮುಂಚೆಯೇ ಗೊತ್ತಿರಲಿಲ್ವೇ? ಎರಡು ವರ್ಷದಿಂದ ಕೆಜಿಎಫ್ ಬಗ್ಗೆ ದೊಡ್ಡಮಟ್ಟಿನ ಚರ್ಚೆ ಆಗುತ್ತಲೇ ಇದ್ದು, ಈ ಬಗ್ಗೆ ವೆಂಕಟೇಶ್ ಅವರಿಗೆ ಗೊತ್ತಿರದೇ ಇರಲು ಸಾಧ್ಯ ಇಲ್ಲ. ಬಿಡುಗಡೆಯ ಕೊನೆ ಕ್ಷಣದಲ್ಲಿ ಈ ರೀತಿ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದು, ದುರುದ್ದೇಶವೇ ಆಗಿದ್ದು, ಚಿತ್ರ ರಿಲೀಸ್ ಆಗುವುದು ಬಹುತೇಕ ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷದವರೆಗೆ ‘ಕೆಜಿಎಫ್’ ರಿಲೀಸ್ ಗೆ ತಡೆ..!
TRENDING ARTICLES