Thursday, October 31, 2024

ಸಂಕ್ರಾಂತಿ ಹಬ್ಬದ ದಿನವೇ ಕಬ್ಬಿನಗದ್ದೆಯಲ್ಲಿ ಗಜಪಡೆ ಮಸ್ತಿ

ಚಿಕ್ಕಮಗಳೂರು : ಸಂಕ್ರಾಂತಿ ಹಬ್ಬದ ದಿನವೇ ಕಬ್ಬಿನಗದ್ದೆಯಲ್ಲಿ ಗಜಪಡೆಗಳ ಮಸ್ತಿ  ನಗರದ ಪಕ್ಕದಲ್ಲಿರುವ ಎರೇಹಳ್ಳಿ ಈ ಘಟನೆ ಕಂಡುಬಂದಿದೆ.

ಗಜಪಡೆಯ ಆರ್ಭಟಕ್ಕೆಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ , ಕಾಡಾನೆಗಳ ದಾಂಧಲೆ ದೃಶ್ಯವನ್ನು ಕಂಡರೆ ಬೆರಗಾಗೋದು ಗ್ಯಾರಂಟಿ. ಗಜಪಡೆಯನ್ನ ಕಾಡಿಗಟ್ಟಲು ಅರಣ್ಯ‌ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಯಾರೇ ಕೂಗಾಡಲಿ, ಊರೇ ಹೋರಾಡಲಿ ನಾವ್ ಹೋಗಲ್ಲವೆಂದು ಪಟ್ಟುಹಿಡಿದ ಗಜಪಡೆ ಸೈನ್ಯ ಆನೆ ನಡೆದಿದ್ದೇ ದಾರಿ ಅನ್ನೋದನ್ನ ಈ ಗಜಪಡೆ ಸಾಬೀತು ಮಾಡಿದೆ.

RELATED ARTICLES

Related Articles

TRENDING ARTICLES