ನವದೆಹಲಿ : ಕೋವಿಡ್ನಿಂದ ಸಂಪೂರ್ಣ ಚೇತರಿಕೆಗೊಂಡ ನಂತರ ಪಯಣ ಮಾಡಲು ಸಿಎಂ ಬೊಮ್ಮಾಯಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ.
ಕೋವಿಡ್ನಿಂದ ಸಂಪೂರ್ಣ ಚೇತರಿಕೆ ನಂತರ ದೆಹಲಿಗೆ ಪಯಣ ಮಾಡಲಿರುವ ಸಿಎಂ ಬೊಮ್ಮಾಯಿ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ವರಿಷ್ಠರ ಭೇಟಿ ಮಾಡಲಿದ್ದಾರೆ. 11 ಮಂದಿಯ ಪಟ್ಟಿ ರೆಡಿ ಮಾಡಿರುವ ಸಿಎಂ ಬೊಮ್ಮಾಯಿ ಆ ಹೊಸ ಪಟ್ಟಿ ಹಿಡಿದೇ ದೆಹಲಿಗೆ ಭೇಟಿ ನೀಡಲಿರುವ ಸಿಎಂ , ಅಮಿತ್ ಶಾ, ಜೆಪಿ ನಡ್ಡಾರನ್ನ ಭೇಟಿ ಮಾಡಲಿರುವ ಬೊಮ್ಮಾಯಿ ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಆರಂಭಗೊಳ್ಳಲಿದೆ.ಆರೇಳು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶವನ್ನು ನೀಡಲಾಗುತ್ತದೆ.ಉಳಿದ ನಾಲ್ಕು ಖಾತೆಗಳ ಭರ್ತಿಗೆ ಸಿಎಂ ಚಿಂತನೆಯನ್ನು ನಡೆಸುತ್ತಿದ್ದಾರೆ.ಸಂಪುಟ ಪುನಾರಚನೆ ವಿಳಂಬಕ್ಕೆ ಶಾಸಕರು ಅಸಮಾಧಾನ ಹೊಂದಿದ್ದು,ಹೀಗಾಗಿ ಸಂಪುಟ ಪುನಾರಚನೆ ಮಾಡಿದರೆ ಸಮಸ್ಯೆಗೆ ಬ್ರೇಕ್ ಬಿದ್ದಿದೆ. ನಂತರ ಚುನಾವಣೆಗೆ ತಯಾರಿ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಹೊಂದಿದ್ದು,ಹೀಗಾಗಿ ವರಿಷ್ಠರ ಅನುಮತಿ ಪಡೆಯಲು ಮುಂದಾಗಿರುವ ಸಿಎಂ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್ ಎಂ.ಪಿ.ರೇಣುಕಾಚಾರ್ಯ, ಆನಂದ ಮಾಮನಿ , ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ ಕುಮಾರ್ ಪಾಟೀಲ್ ಸೇಡಂ,ಪೂರ್ಣಿಮಾ ಶ್ರೀನಿವಾಸ್, ರಾಮದಾಸ್, ಪ್ರೀತಂಗೌಡ,ಸುರಪುರದ ರಾಜುಗೌಡ, ಶಿವನಗೌಡ ನಾಯಕ್,ಚಿತ್ರದುರ್ಗದ ತಿಪ್ಪಾರೆಡ್ಡಿ,ರಾಮಣ್ಣ ಲಮಾಣಿ ಹಾಗಾಗಿ ಸಂಪುಟ ಪುನಾರಚನೆ ಮಾಡಬೇಕಾದ ಅನಿವಾರ್ಯತೆ ಸಿಎಂಗೆ ಇದೆ,ಸಂಪುಟ ಪುನಾರಚನೆ ಕುರಿತು ಚರ್ಚಿಸಲು ವರಿಷ್ಠರ ಭೇಟಿ ಮಾಡಿದ ಸಿಎಂ 11 ಮಂದಿಯ ಪಟ್ಟಿ ರೆಡಿ ಮಾಡಿದ್ದಾರೆ.ಆ ಹೊಸ ಪಟ್ಟಿ ಹಿಡಿದೇ ದೆಹಲಿಗೆ ಭೇಟಿ ನೀಡಲಿರುವ ಸಿಎಂ,ಅಮಿತ್ ಶಾ, ಜೆಪಿ ನಡ್ಡಾರನ್ನ ಭೇಟಿ ಮಾಡಲಿದ್ದಾರೆ,
ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಆರಂಗೊಳ್ಳುತ್ತದೆ,ಆರೇಳು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದ್ದು, ಉಳಿದ ನಾಲ್ಕು ಖಾತೆಗಳ ಭರ್ತಿಗೆ ಸಿಎಂ ಚಿಂತನೆಯನ್ನು ನಡೆಸಿದ್ದಾರೆ.