ಗದಗ : ಅಪ್ಪು ಅಮರವಾಗಿ ಮೂರು ತಿಂಗಳು ಆಗ್ತಾ ಬಂತು ಅವರ ಸಾವಿನ ನೋವಿನಿಂದ ಹೊರಬಾರದ ಅಪ್ಪಟ ಅಭಿಮಾನಿ ಅಪ್ಪು ದೇವರೆಂದು ತನ್ನ ಮನೆ ಜಗಲಿ ಮೇಲೆ ಫೋಟೋ ಇಟ್ಟು ನಿತ್ಯ ಪೂಜೆಯ ಜೊತೆಗೆ ತನ್ನ ಉಸಿರೋವರೆಗೂ ಅಪ್ಪು ಹೆಸರು ಅಜರಾಮರವಾಗಿರಲೆಂದು ಈತ ಮಾಡಿದ್ದೇನು ಗೊತ್ತಾ?
ಗದಗ ತಾಲೂಕಿನ ಸಂಭಾಪುರ ಗ್ರಾಮದಲ್ಲಿ ಅಪ್ಪು ಅಪ್ಪಟ ಅಭಿಮಾನಿ ಮುತ್ತಪ್ಪ ಅಲಿಯಾಸ್ ಅಪ್ಪು ಹೊನರೆಡ್ಡಿ ಅಪ್ಪು ನಿಧನದ ಸುದ್ದಿ ತಿಳಿದು ತನ್ನ ಹಮಾಲಿ ಕೆಲಸ ಬಿಟ್ಟು ಬೆಂಗಳೂರಿಗೆ ತೆರಳಿದ್ದ ಮೂರು ದಿನ ಸಮಾಧಿ ಬಳಿ ಸೇವೆ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಯಾವ ರೀತಿ ತಿಥಿಕಾರ್ಯ ಮಾಡುತ್ತಾರೋ ತಾನೂ ಸಹ ಕಾರ್ಯ ಮಾಡಿದ್ದ ನಿತ್ಯ ಮನೆಯ ಜಗುಲಿ ಮೇಲೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದ. ಹಮಾಲಿ ಹಾಗೂ ಕೃಷಿ ಕಾಯಕ ಮಾಡೋ ಈ ಜೂನಿಯರ್ ಅಪ್ಪು ಇಬ್ಬರು ಗಂಡು ಮಕ್ಕಳಿಗೆ ಕರ್ನಾಟಕ ರತ್ನ ಪುನೀತ್ ಹೆಸರು ನಾಮಕರಣ ಮಾಡಿದ್ದು, ಹಿರಿಯ ಮಗನಿಗೆ ಅಪ್ಪು, ೨ ನೇ ಮಗನಿಗೆ ಅಭಿ ಅಂತ ಹೆಸರಿಡಲಾಗಿದೆ.
ಮೈ, ಕೈ, ಎದೆ ಭಾಗದಲ್ಲೆಲ್ಲಾ ಅಚ್ಚಳಿಯದಂತೆ ಅಚ್ಚೆ ಹಾಕಿಸಿಕೊಂಡಿರೋ ಅಪ್ಪಟ ಅಭಿಮಾನಿ ಮನೆ, ಮನ ತುಂಬೆಲ್ಲಾ ಅಪ್ಪುವಿನ ಅಭಿಮಾನ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ರಾರಾಜಿಸ್ತಿರೋ ಮರೆಯಾದ ಮಾಣಿಕ್ಯನ ಭಾವಚಿತ್ರಗಳು. ಮಕರ ಸಂಕ್ರಮಣದಂದು ಪ್ರತಿವರ್ಷ ಮನೆದೇವರಿಗೆ ಹೋಗುತ್ತಿದ್ದ ಈ ಕುಟುಂಬಸ್ಥರು, ಈ ವರ್ಷ ಮನೆಯಲ್ಲೇ ಇದ್ದು ಪರಮಾತ್ಮನಿಗೆ ವಿಶೇಷವಾದ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ದೊಡ್ಮನೆ ಹುಡಗ ಇಲ್ಲವಾಗಿ ೩ ತಿಂಗಳಾದರು ಶೋಕದಿಂದ ಮುತ್ತಪ್ಪ ಹೊರಬಂದಿಲ್ಲ. ಸಾವಿನಿಂದ ಆದ ನೋವಿನ ಹಿನ್ನೆಲೆ ಹಮಾಲಿ ಕೆಲಸ, ಕೃಷಿ ಕೆಲಸಕ್ಕೂ ಹೋಗದೇ ೩ ತಿಂಗಳಾಯಿತು. ಇಂತಹ ಅಭಿಮಾನಿಗಳನ್ನು ಪಡೆದು ಇವರೆಲ್ಲರನ್ನೂ ಇಷ್ಟು ಬೇಗ ಬಿಟ್ಟು ಹೋಗಿರುವುದು ಬಹಳ ವಿಷಾದಕರ ಸಂಗತಿಯಾಗಿದೆ. ಹಾಗೂ ಸಂಭಾಪುರದ ಮುತ್ತಪ್ಪನ ಪ್ರೀತಿ, ವಾತ್ಸಲ್ಯಕ್ಕೆ ಪಾರವೇ ಇಲ್ಲ.