ಶ್ವಾನಗಳು ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ ಜಗತ್ತಿನ ಎಲ್ಲಾ ಪ್ರಾಣಿ ಸಂಕುಲದಲ್ಲಿ ಮಾನವನ ಭಾವನೆಗಳಿಗೆ ತಕ್ಷಣ ಸ್ಪಂದಿಸುವ ಪ್ರಾಣಿ ಅಂದ್ರೆ ಅದು ನಾಯಿಗಳು ಮಾತ್ರ, ತನ್ನ ಮಾಲಿಕ ನೀಡುವ ಆದೇಶವನ್ನ ಚಾಚು ತಪ್ಪದೇ ಪಾಲಿಸುವ ನಾಯಿಗಳು, ತಮ್ಮ ಮಾಲಿಕನಿಗೆ ಏನಾದರು ತೊಂದರೆಯಾದರೆ ಆತನನ್ನ ರಕ್ಷಿಸೋದಕೆ ತಾನೇ ಮೊದಲು ಬಂದು ನಿಲ್ಲುತ್ತವೆ. ಹಾಗಾಗಿಯೇ ಶ್ವಾನಗಳನ್ನ ನಿಯತ್ತಿನ ಪ್ರಾಣಿ ಅಂತ ಕರೆಯಲಾಗುತ್ತದೆ. ಹೀಗಾಗಿ ಇವತ್ತು ಜಗತ್ತಿನಲ್ಲಿ ಶೇ33 ರಷ್ಟು ಜನ ನಾಯಿಗಳನ್ನ ಸಾಕುತ್ತಿದ್ದಾರೆ. ಜೊತೆಗೆ ಅವುಗಳ ಆರೈಕೆ ಪಾಲನೆಯ್ಲಲಿ ಸಾಮಾನ್ಯ ಜನರು ಕೂಡ ಹೆಚ್ಚಿನ ಉತ್ಸಾಹವನ್ನ ತೋರಿಸುತ್ತಾರೆ.
ಇವತ್ತು ಜಾಗತಿಕವಾಗಿ ಸುಮಾರು 90 ಕೋಟಿ ಶ್ವಾನಗಳಿದ್ದು, ಜಗತ್ತಿನಲ್ಲಿ ಶ್ವಾನಗಳ ರಕ್ಷಣೆಗೆಂದೆ ಸುಮಾರು 1 ಲಕ್ಷಕ್ಕೂ ಅಧಿಕ ಸಂಘಟನೆಗಳಿವೆ ಅಂತ ಹೇಳಲಾಗ್ತಾ ಇದೆ. ಸಾಕಷ್ಟು ಜನಕ್ಕೆ ಯಾಕೆ ನಾಯಿಗಳ ರಕ್ಷಣೆಗೆ ಇಷ್ಟೋಂದು ಸಂಘಟನೆ ಇದೆ ಅನುಮಾನ ಕಾಡಬಹುದು. ಅದಕ್ಕೆ ಪ್ರಮುಖವಾದ ಕಾರಣ ಅಂದ್ರೆ ನಾವು ಮೊದಲೇ ಹೇಳಿದಂತೆ ನಾಯಿಗಳ ವರ್ತನೆ ಹಾಗು ಅವು ಮಾನವನ ಭಾವನೆಗೆ ಸ್ಪಂದಿಸುವ ರೀತಿ. ಈ ಬಗ್ಗೆ ಹಿಂದಿನಿಂದಲೂ ಸಾಕಷ್ಟು ವರದಿಗಳು ಬಂದಿದ್ದು, ನಾಯಿಗಳು ಮಾನವನಿಗೆ ವಿಧೆಯವಾಗಿರುವ ರೀತಿಯಿಂದಾಗಿ ಶ್ವಾನಗಳಿಗೆ ಮಾನವ ಸಮಾಜದಲ್ಲಿ ಪ್ರಮುಖ ಹುದ್ದೆಗಳನ್ನ ನೀಡಲಾಗಿದೆ. ಅವುಗಳಲ್ಲಿ ಪೊಲೀಸ್, ಸೇನೆ, ಬಾಂಬ್ ಸ್ಕ್ವಾಡ್ ಸೇರಿದಂದತೆ ಹಲವು ಪ್ರಮುಖ ಹುದ್ದೆಗಳನ್ನ ನೀಡಲಾಗುತ್ತದೆ. ಆದ್ರೆ ಇದೀಗೆ ವಿಶ್ವದಲ್ಲೇ ಮೊದಲ ಬಾರಿಗೆ ಅಮೆರಿಕ ಶ್ವಾನಗಳಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ನೀಡಿದೆ.. ಅದು ಕೂಡ ಕೊರೋನಾ ಪತ್ತೆ ಹಚ್ಚುವ ಕೆಲಸಕ್ಕಾಗಿ.
ಈ ವಿಚಾರ ನಿಮಗೆ ಅಚ್ಚರಿಯನ್ನ ಮೂಡಿಸಬಹುದು, ಆದ್ರೆ ಇದು ಅಕ್ಷರಶಃ ನಿಜ.. ಅಲ್ಲ ಕೊರೋನಾ ಬಂದು ಜನ ಸಾಯ್ತಾ ಇದ್ದಾರೆ, ಅದೇನೋ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್, ಕೊರೋನಾ ಟೆಸ್ಟ್ ಅಂತ ಹೇಳ್ತಾರೆ.. ಆ ಟೆಸ್ಟ್ಗಳನ್ನ ಮಾಡ್ಸಿದ್ರು ಕೂಡ ಕೆಲವೊಂದ್ಸಾರಿ ಸರಿಯಾಗಿ ಕೊರೋನಾ ಇದ್ಯೊ? ಇಲ್ವೋ? ಅನ್ನೋದೇ ಗೊತ್ತಾಗೊಲ್ಲ. ಇನ್ನು ನಾಯಿ ಹೇಗ್ರಿ ಕೊರೋನಾ ಪತ್ತೆ ಹಚ್ಚುತ್ತೆ, ಅಂತ ನಿಮ್ಮಲ್ಲಿ ಕೆಲವರಿಗೆ ಅನುಮಾನ ಮೂಡ್ತಾ ಇರ್ಬಹುದು.. ಆದ್ರೆ ಇದು ಸಾಧ್ಯವಿದೆ ನಾಯಿಗಳು ಕೂಡ ಕೊರೋನಾ ಪತ್ತೆ ಹಚ್ಚುತ್ತೆ ಅದು ಕೂಡ ವಾಸನೆಯ ಮೂಲಕ ಅಂತ ಅಮೆರಿಕದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳೇ ಹೇಳ್ತಾ ಇದ್ದಾವೆ. ಇದಕ್ಕೆ ಪೂರಕ ಅನ್ನೋ ಹಾಗೆ 14 ತಿಂಗಳ ಲ್ಯಾಬ್ರಡಾರ್‌ಗಳನ್ನ, ಅಮೆರಿಕದ ಲೇಕ್ ವಿಲ್ಲೆಯ ಫ್ರೀಟೌನ್-ಲೇಕ್ ವಿಲ್ಲೆ ರೀಜನಲ್ ಸ್ಕೂಲ್ ಸೇರಿದ ಹಾಗೆ ಹಲವು ಶಾಲೆಗಳ ಕ್ಯಾಂಪಸ್‌ಗಳಲ್ಲಿ ನಾಯಿಗಳನ್ನ ಓಡಾಡಲು ಬಿಡಲಾಗಿದೆ. ಈ ಮೂಲಕ್ ಎಲ್ಲಾದರು ಕೊರೋನಾಗೆ ಪೂರಕವಾದ ವಾಸನೆಗಳು ನಾಯಿಗೆ ಕಂಡು ಬಂದು ಬಂದರೆ, ಆ ಜಾಗವನ್ನ ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುತ್ತಿದೆಯಂತೆ.
ಇದೀಗ ಹೀಗೆ ಓಡಾಡಿದದ ಎರಡು ನಾಯಿಗಳಿಗೆ ಬ್ರಿಸ್ಟಲ್ ಕೌಂಟಿ ಶೆರಿಫ್ ಕಚೇರಿ ಮತ್ತು ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ತರಬೇತಿ ನೀಡಲಾಗಿದ್ದು, ಈ ಎರಡು ನಾಯಿಗಳ ಫೋಟೋಗಳನ್ನು ಬ್ರಿಸ್ಟಲ್ ಕೌಂಟಿ ಶೆರಿಫ್ ಕಚೇರಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಹಂಚಿಕೊಂಡಿದೆ. ಫೋಟೋ ಹಂಚಿ ಕೊಳ್ಳುವುದರ ಜೊತೆಗೆ ಇವರು ‘ಕೆ9ರ ಹಂಟಾ ಮತ್ತು ಡ್ಯೂಕ್ ಇಂದು ಕೆಲವು ಕೋವಿಡ್ ಪ್ರಕರಣಗಳ ಪತ್ತೆ ಕಾರ್ಯಕ್ಕಾಗಿ ನಾರ್ಟನ್ ಮಿಡಲ್ ಸ್ಕೂಲ್‌ಗೆ ಭೇಟಿ ನೀಡಿದವು. ಸುಪರಿಟೆಂಡೆಂಟ್ ಬೇಟಾ ಮತ್ತು ನಾರ್ಟನ್ ಸ್ಕೂಲ್ ಸಿಬ್ಬಂದಿಗಳಿಗೆ ಮತ್ತು ಫೋರೆಂಸಿಕ್ ಸಿಬ್ಬಂದಿಯ ಸಹಾಯಕ್ಕಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಇನ್ನಷ್ಟು ಶ್ವಾನಗಳನ್ನ ಕೊರೋನಾ ಪರೀಕ್ಷಗಳಿಗಾಗಿ ಬಳಸಿಕೊಳ್ಳುತ್ತಿದ್ದವೆ ಅನ್ನೋದನ್ನ ಹೇಳಿಕೊಂಡಿದ್ದಾರೆ.
ಇನ್ನು ಈ ಶ್ವಾನಗಳು ಕೊರೋನಾ ಪತ್ತೆ ಹಚ್ಚೋದಕ್ಕೆ ಹಲವು ತಿಂಗಳುಗಳ ವಿಶೇಷ ತರಬೇತಿಯನ್ನ ಪಡೆದಿರುತ್ತವೆ, ಇವುಗಳ ತರಬೇತಿಗಾಗಿ ಸೋಂಕಿತ ವ್ಯಕ್ತಿಯ ಮಾಸ್ಕ್ ಅನ್ನ ಬಳಸಲಾಗುತ್ತೆ, ಕೊರೋನಾ ಸೋಂಕಿತ ವ್ಯಕ್ತಿ ಧರಿಸಿದ್ದ ಮಾಸ್ಕ್ ಅನ್ನ ಯುವಿ ಬೆಳಕಿನಿಂದ ವೈರಸ್ ಅನ್ನು ಕೊಂದ ನಂತರ, ಮಾಸ್ಕ್ ಅನ್ನು ಅನೇಕ ತುಂಡುಗಳಾಗಿ ಕತ್ತರಿಸಲಾಗುತ್ತೆ. ಬಳಿಕ ಅದನ್ನ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ನಾಯಿಗಳಿಗೆ ಆ ವಾಸನೆ ಕಂಡು ಹಿಡಿಯಲು ಕೊಡಲಾಗುತ್ತೆ. ಕೋವಿಡ್ ಸೋಂಕು ತಗುಲಿದ ರೋಗಿಗಳ ಚಯಾಪಚಯ ಕ್ರಿಯೆಯಲ್ಲಿ ಒಂದು ನಿರ್ದಿಷ್ಟವಾದ ವಾಸನೆ ಉತ್ಪಾದನೆಯಾಗುತ್ತೆ, ಈ ವಾಸನೆಯನ್ನ ತೆಗೆದುಕೊಳ್ಳುವ ಶ್ವಾನ ಇದನ್ನ ಗಮನದಲ್ಲಿ ಇಟ್ಟುಕೊಂಡಿರುತ್ತೆ. ಬಳಿಕ ಕೊರೋನಾ ಪತ್ತೆಗಾಗಿ ಹೋದಾಗ ಅಲ್ಲಿ ಇದೇ ತೆರನಾದ ವಾಸನೆ ಕಂಡು ಬಂದಾಗ ಅದರ ಬಗ್ಗೆ ತನ್ನ ವರ್ತನೆಯ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತೆ. ಆ ಮೂಲಕ ಕೊರೋನಾ ಪತ್ತೆ ಹಚ್ಚೋದಕ್ಕೆ ಈ ಶ್ವಾನಗಳು ನೆರವಾಗುತ್ತವೆ.
ಈಗಾಗ್ಲೆ ಈ ಶ್ವಾನಗಳು ಕೆಲವೊಂದು ಕೊರೋನಾ ಕೇಸ್ಗಳನ್ನ ಪತ್ತೆ ಹಚ್ಚಿದೆ ಅಂತ ಹಲವು ವರದಿಗಳು ಕೂಡ ಪ್ರಕರಣವಾಗಿದೆ. ಇನ್ನು ಈ ಬಗ್ಗೆ ಸುದ್ದಿ ವೈರಲ್ ಆಗ್ತಾ ಇದ್ದ ಹಾಗೆ ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಕೂಡ ಸಂಶೋಧನೆಯನ್ನ ನಡೆಸಿತ್ತು.. ಬಳಿಕ ಈ ಸಂಸ್ಥೇ ಮತ್ತೊಂದು ಅಧ್ಯಯನವು ನಾಯಿಗಳು 6 ರಿಂದ 8 ವಾರಗಳ ತರಬೇತಿಯನ್ನು ಪಡೆದ ನಂತರ ಕೋವಿಡ್ ಸೋಂಕಿರುವ ರೋಗಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಸದ್ಯಕ್ಕೆ ಈಗ ಎರಡು ನಾಯಿಗಳು ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡುತ್ತಿದ್ದು ಇವು ಕೊರೋನಾ ಪತ್ತೆ ಹಚ್ಚುವ ಕೆಲಸವನ್ನ ಮಾಡ್ತಾ ಇದೆ. ಇವುಗಳ ಕಾರ್ಯವೈಖರಿ ಹೇಗಿದೆ ಎಂದು ನೋಡಿಕೊಂಡು ಬಳಿಕ ಮತ್ತಷ್ಟು ಶ್ವಾನಗಳಿಗೆ ತರಬೇತಿ ಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಒಟ್ಟಾರೆಯಾಗಿ ಶ್ವಾನಗಳು ಕೊರೋನಾ ಪತ್ತೆ ಹಚ್ಚುತ್ತವೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಶ್ವಾನಗಳ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ ವಾಗ್ತಾ ಇದೆ. ಆದ್ರೆ ಈ ವಿಚಾರದಲ್ಲಿ ಆಕ್ರೋಶ ವ್ಯಕ್ತ ಪಡಿಸಿರುವ ಶ್ವಾನ ಪ್ರಿಯರು ಇದರಿಂದ ನಾಯಿಗಳ ಜೀವಕ್ಕೆ ತೊಂದರೆಯಾದ್ರೆ ಯಾರು ಜವಬ್ದಾರರು ಅನ್ನೋ ಪ್ರಶ್ನೆಯನ್ನ ಮುಂದಿಟ್ಟಿದ್ದಾರೆ. ಈ ಬಗ್ಗೆ ಕೂಡ ತೀವ್ರ ಚರ್ಚೆ ಕೂಡ ಹುಟ್ಟಿಸಿದೆ.
ಲಿಖಿತ್ ರೈ, ಪವರ್ ಟಿವಿ