Saturday, November 2, 2024

ಮುಂದಿನವಾರದಿಂದ ವೀಕೆಂಡ್ ಕರ್ಫ್ಯೂ ಬಹಿಷ್ಕಾರಕ್ಕೆ ನಿರ್ಧಾರ ?

ಕರ್ನಾಟಕ : ರಾಜ್ಯ ಸರ್ಕಾರದ ವಿರುದ್ಧ ಹೋಟೆಲ್ ಮತ್ತು ಬಾರ್ ಮಾಲೀಕರು ಸಿಡಿದೆದ್ದಿದ್ದಾರೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಅನ್ನೋ ನೀತಿ ಅನುಸರಿಸ್ತಿದೆ. ಮುಂದಿನ ವಾರದಿಂದ ವೀಕೆಂಡ್ ಕರ್ಫ್ಯೂ ಬಹಿಷ್ಕರಿಸಲು ಹೋಟೆಲ್​ ಹಾಗೂ ಬಾರ್​​​ ಮಾಲೀಕರು ನಿರ್ಧಾರ ಮಾಡಿದ್ದಾರೆ.

ಸರ್ಕಾರ ಕೊರೋನಾ ಸೋಂಕನ್ನ ನಿಯಂತ್ರಣಕ್ಕೆ ತರೋ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಸೋಂಕು ಏರಿಕೆಗೆ ಬ್ರೇಕ್ ಹಾಕೋಕೆ ಸರ್ಕಾರ ಅದೇ ಹಳೇ ಅಸ್ತ್ರ ಪ್ರಯೋಗಿಸಿದೆ. ಇದು ಹೊಸ ಬಾಟೆಲ್​ನಲ್ಲಿ ಹಳೆ ಮದ್ಯ ಕೊಟ್ಟಂತೆ. ಸರ್ಕಾರದ ಈ ನೀತಿಯಿಂದ ನಯಾಪೈಸೆ ಉಪಯೋಗ ಇಲ್ಲ ಅಂತಾನೇ ಹೇಳಬಹುದು.

ಈ ನೀತಿ ಕೇವಲ ಹೋಟೆಲ್ ಹಾಗೂ ಬಾರ್ ಮಾಲೀಕರನ್ನ ಬೀದಿಗೆ ತಂದು ನಿಲ್ಲಿಸೋ ಕ್ರಮ ಅಂತ ಹೋಟೆಲ್ ಹಾಗೂ ಬಾರ್ ಮಾಲೀಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಸರ್ಕಾರ ಈ ವೀಕೆಂಡ್ ಕರ್ಫ್ಯೂವನ್ನ ಹಿಂದಕ್ಕೆ ಪಡಿಬೇಕು ಹಾಗೂ ನೈಟ್ ಕರ್ಫ್ಯೂವನ್ನ ತಡವಾಗಿ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಾದಯಾತ್ರೆಗೆ ಅವಕಾಶ ಕೊಟ್ರಿ, ಗೂಳಿ ಓಟಕ್ಕೆ ಅನುಮತಿ ಇತ್ತು, MLCಗಳ ಪ್ರಮಾಣವಚನವೂ ಭರ್ಜರಿಯಾಗೇ ನಡೆಯಿತು. ಈಗ ಹೋಟೆಲ್ ಹಾಗೂ ಬಾರ್ ಮಾಲೀಕರ ಮೇಲೆ ಗಧಾ ಪ್ರಹಾರ ಮಾಡಲು ಹೊರಟಿದ್ದೀರಿ. ಇದನ್ನ ಒಪ್ಪೋದಿಲ್ಲ. ಈ ವಾರ ವೀಕೆಂಡ್ ಕರ್ಫ್ಯೂ ಪಾಲನೆ ಮಾಡ್ತೀವಿ. ನೀವು ಅಷ್ಟರೊಳಗೆ ವೀಕೆಂಡ್ ಕರ್ಫ್ಯೂ ವೇಳೆ ಹೋಟೆಲ್​​ ಹಾಗೂ ಬಾರ್​​​ ಅಂಡ್​​ ರೆಸ್ಟೋರೆಂಟ್​​​ಗಳಲ್ಲಿ 50-50ಗೆ ಅನುಮತಿ ಕೊಡದಿದ್ರೆ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಬಹಿಷ್ಕರಿಸೋಕೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ ಎಂದು ಮಾಲೀಕರು  ಹೇಳಿದರೇ, ಸರ್ಕಾರದ ನೀತಿಯಿಂದ ಕೆಲ ವರ್ಗಕ್ಕೆ ಸಮಸ್ಯೆ ಆಗುತ್ತೆ ಅಂತ ಗೊತ್ತಿದೆ. ಜನರ ಆರೋಗ್ಯದ ಸಲುವಾಗಿ ಕರ್ಫ್ಯೂ ತರಲಾಗಿದೆ. ಎಲ್ಲರೂ ಸಹಕಾರ ನೀಡಬೇಕೆಂದು ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ವೀಕೆಂಡ್ ಕರ್ಫ್ಯೂ ವಿರುದ್ಧ ಹೋಟೆಲ್ ಹಾಗೂ ಬಾರ್ ಮಾಲೀಕರು ಸಿಡಿದೆದ್ದಿದ್ದಾರೆ. ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಬೀದಿಗಿಳಿದು ಹೋರಾಟ ಮಾಡಲು ಒಮ್ಮತದಿಂದ ತೀರ್ಮಾನಿಸಿದ್ದಾರೆ. ಮೊದಲ ಹಾಗೂ 2ನೇ ಅಲೆಯಲ್ಲಿ ಸರ್ಕಾರ ಹೇಳಿದ್ದೆಲ್ಲವನ್ನ ಪಾಲಿಸಿದ್ದ ಹೋಟೆಲ್ ಹಾಗೂ ಬಾರ್ ಮಾಲೀಕರು ಈ ಬಾರಿ ಯಾಕೋ ಸರ್ಕಾರದ ವಿರುದ್ಧ ತಿರುಗಿಬಿದ್ದಂತೆ ಕಾಣ್ತಿದೆ.

RELATED ARTICLES

Related Articles

TRENDING ARTICLES