ಬೆಂಗಳೂರು : ಮಕರ ಸಂಕ್ರಾಂತಿ’ ಹಬ್ಬ ಒಂದು ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ. ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸುವ ಮತ್ತು ಉತ್ತರ ಗೋಳಾರ್ಧದ ಕಡೆಗೆ ಚಲಿಸಲು ಪ್ರಾರಂಭಿಸುವ ದಿನವನ್ನು ಗುರುತಿಸುತ್ತದೆ.
ಈ ದಿನಾಂಕದಿಂದ ಜನರು ಹೆಚ್ಚು ದಿನಗಳು ಮತ್ತು ಕಡಿಮೆ ರಾತ್ರಿಗಳನ್ನು ಕಾಣಬಹುದು. ದೇಶದ ವಿವಿಧ ಭಾಗಗಳಲ್ಲಿ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಇನ್ನು, ದಕ್ಷಿಣಾಯಣದಿಂದ ಉತ್ತರಾಯಣ ಪ್ರವೇಶಿಸುವ ಮುನ್ನ ಭಾಸ್ಕರ ಪರಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ.
ಪ್ರತಿ ವರ್ಷವೂ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ದೇವಸ್ಥಾನವಾದ ಗವಿಗಂಗಾಧೇಶ್ವರ ದೇಗುಲದಲ್ಲಿ ಸೂರ್ಯನ ಕಿರಣಗಳು ಪರಮಾತ್ಮನದ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಇದರಿಂದ ಣಾಡಿನ ಜನತೆಗೆ ಒಳ್ಳೆಯದು ಆಗುತ್ತದೆ ಎಂಬುದು ಎಲ್ಲರ ನಂಬಿಕೆ. ಅದರೆ ಹಿಂದಿನ ವರ್ಷ ಇಂತಹವೊಂದು ಕೌತಕ ನಡೆಯುತ್ತದೆ ಎಂದು ಎಲ್ಲರ ಕಾತುರದಿಂದ ಕಾಯುತ್ತಿದ್ದರು.
ಆದರೆ ಕಳೆದ ವರ್ಷ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಅದು ಕೇಡಿನ ಸೂಚಕ ಎಂದು ಹೇಳಲಾಗುತ್ತಿತ್ತು. ಹಾಗಾಗಿ ಈ ಬಾರಿ ಏನಾಗುತ್ತದೆ ಎನ್ನುವ ಕುತೂಹಲ ಭಕ್ತರನ್ನು ಕಾಡುತ್ತಿದೆ.