Friday, November 22, 2024

ಸಂಕ್ರಾಂತಿಯಲ್ಲಿ ಸಂಭ್ರಮ ಸಡಗರ ಮಾಯ

ಇಂದು ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ. ಪ್ರತಿ ವರ್ಷ ಧಾಮ್ ದುಂ ಅಂತ ಹಬ್ಬದ ತಯಾರಿ ಮಾಡಿಕೊಳ್ಳುತ್ತೀದ್ದೀವಿ. ಅದ್ರೀಗ ಕೊರೋನಾ ಹೆಚ್ಚಳ ಹಾಗೂ ಸರ್ಕಾರದ ಗೈಡ್ ಲೈನ್ಸ್ ಎಫೆಕ್ಟ್​​​ನಿಂದ ಈ ಬಾರಿ ಸೆಲೆಬ್ರೇಷನ್ ಫುಲ್ ಡಲ್ ಆಗಿದೆ. ಹಾಗಾದ್ರೆ ಈ ಬಾರಿ ಹಬ್ಬಕ್ಕೆ ಬೇಕಾದ ತರಕಾರಿ ,ಹಣ್ಣು, ಹೂವು ಖರೀದಿ ಸಿದ್ದತೆ ಹೇಗಿದೆ?

ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬ ಭರಾಟೆ. ರಾಜಧಾನಿ ಬೆಂಗಳೂರು ಜನರಿಗೆ ಸಂಕ್ರಾಂತಿ ಅಂದ್ರೆ ಎಲ್ಲಿಲ್ಲದ ಸಡಗರ ಸಂಭ್ರಮ. ಸಂಕ್ರಾಂತಿಯನ್ನ ವಿಜ್ರಂಭಣೆಯಿಂದ ಆಚರಿಸಲು ಕೆ.ಆರ್.ಮಾರ್ಕೆಟ್​​​ನಲ್ಲಿ ಪ್ರತಿವರ್ಷ ಜನ ಜಾತ್ರೆಯಂತೆ ತುಂಬಿ ತುಳುಕುತ್ತಿತ್ತು. ಕಾಲಿಡಲಾಗದ ರೀತಿ ಜನ ತುಂಬಿರುತ್ತಿದ್ರು. ಆದ್ರೆ ಈ ಬಾರಿ ಆ ಸಡಗರ ಮಾಯವಾಗಿದೆ. ಕೊರೋನಾ ಕಾರಣ ಸಣ್ಣಪುಟ್ಟ ಮಾರುಕಟ್ಟೆ ಅತ್ತ ಜನ ಮುಖ ಮಾಡಿದ್ದಾರೆ. ಇನ್ನೂ ಸಂಕ್ರಾಂತಿ ಹಬ್ಬಕ್ಕೆ ಗೆಣಸು, ಕಡಲೆಕಾಯಿ, ಅವರೆಕಾಯಿ, ಕಬ್ಬುಗೆ ಸಿಕ್ಕಪಟ್ಟೆ ಡಿಮ್ಯಾಂಡ್ ಇರುತ್ತಿತ್ತು. ಹಾಗೂ ಎಲ್ಲಿ ನೋಡಿದ್ರು ಕೂಡ ಮಾರುಕಟ್ಟೆ ತುಂಬಾ ಈ ವಸ್ತುಗಳೇ ರಾರಾಜಿಸುತ್ತಿರುತ್ತಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಹಬ್ಬದ ಪ್ರಮುಖ ವಸ್ತುಗಳಾದ ಗೆಣಸು, ಕಡಲೆಕಾಯಿ, ಅವರೆಕಾಯಿ, ಕಬ್ಬು ಕಡಿಮೆ ಕಂಡು ಬರ್ತಿವೆ. ಇನ್ನೂ ಇವುಗಳ ಬೆಲೆ ಮಾತ್ರ ಕಳೆದ ವರ್ಷಕ್ಕಿಂತ ಜಾಸ್ತಿ ಇತ್ತು.

ಇನ್ನೂ ಹಬ್ಬಕ್ಕೆ ಬೇಕಾಗಿರುವ ಹೂ, ಹಣ್ಣು ತರಕಾರಿ ಖರೀದಿಸಲು ಸುಮಾರಾಗಿ ಗ್ರಾಹಕರು ಬಂದಿದ್ರು.. ಆದ್ರೆ ಕೊರೋನಾ ಎಫೆಕ್ಟ್ನಿಂದ ಈ ವರ್ಷದ ಅದ್ದೂರಿ ಹಬ್ಬಕ್ಕೆ ಬ್ರೇಕ್ ಬಿದ್ದಿದ್ದು, ಇನ್ನೂ ಈ ವರ್ಷ ಮಾರುಕಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಖರೀದಿ ಸಾಮಗ್ರಿಗಳು ರವಾನೆಯಾಗಿದ್ದು , ಅವುಗಳ ಸಂಖ್ಯೆ ಗಗನಕ್ಕೆ ಏರಿದೆ. ಆದ್ರೆ ಹಬ್ಬ ಮಾಡೋದು ಅನಿವಾರ್ಯ ಆಗಿರೋದ್ರಿಂದ ಬೆಲೆ ಗಗನಕ್ಕೇರಿದರೂ ಜನರು ವಸ್ತುಗಳನ್ನು ಖರಿದಿ ಮಾಡಿದ್ರು. ಹಣ್ಣು ಹಂಪಲಿನ ದರ ಹೇಗಿತ್ತು ಅನ್ನೋದನ್ನ ನೋಡೋದಾದ್ರೆ.

ಹಣ್ಣಿನ ಬೆಲೆ  : 

ಸೇಬು 1 KGಗೆ- 120 ರೂಪಾಯಿ
ದ್ರಾಕ್ಷಿ- 60 ರೂಪಾಯಿ
ಕಿತ್ತಳೆ- 50 ರೂಪಾಯಿ
ಸಪೋಟಾ- 50 ರೂಪಾಯಿ
ದಾಳಿಂಬೆ- 130 ರೂಪಾಯಿ
ಮರಸೇಬು- 30 ರೂಪಾಯಿ
ಕಡಲೆಕಾಯಿ ಕೆ.ಜಿ 100 ರೂಪಾಯಿ
ಕಬ್ಬು ಜೋಡಿಗೆ 100 ರೂಪಾಯಿ
ಅವರೇಕಾಯಿ ಕೆ.ಜಿ 40 ರಿಂದ 50
ಎಳ್ಳು ಬೆಲ್ಲ ಕೆ.ಜಿಗೆ 250 ರಿಂದ 300

ಒಂದು ಕಡೆ ಹೂ, ಹಣ್ಣು, ತರಕಾರಿ ಬೆಲೆಗಳು ಗಗನಕ್ಕೆ ಏರಿರೋದ್ರಿಂದ ಸಡಗರದಿಂದ ಆಚರಿಸಬೇಕೆಂದಿದ್ದ ಸಂಕ್ರಾಂತಿಯನ್ನ ಜನರು ಸರಳ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ. ವ್ಯಾಪಾರಸ್ಥರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಗ್ರಾಹಕರಿಲ್ಲದೆ ಮಾರುಕಟ್ಟೆ ಮಾತ್ರ ಭಣಗುಡುತ್ತಿದೆ.

RELATED ARTICLES

Related Articles

TRENDING ARTICLES