Saturday, November 23, 2024

ಶಬರಿಮಲೆಯ 18 ಮೆಟ್ಟಲುಗಳು ಧಾರ್ಮಿಕ ಮಹತ್ವವನ್ನು ಹೊಂದಿದೆ

ಮಕರ ಸಂಕ್ರಾಂತಿಯಂದು ಶಬರಿಮಲೆಯ ಅಯ್ಯಪ್ಪ ಸ್ವಾಮಿ ಜ್ಯೋತಿ ಮೂಲಕ ದರ್ಶನವನ್ನು ನೀಡುತ್ತಾರೆ. ಈ ಮಕರ ಜ್ಯೋತಿಯ ದಿನದಂದು ದರ್ಶನಕ್ಕಾಗಿ ಅಯ್ಯಪ್ಪನ ಭಕ್ತರು ಕಾದು ಕುಳಿತಿರುತ್ತಾರೆ. ಇನ್ನು ಶಬರಿ ಮಲೆಯಲ್ಲಿ ಮೂಡುವ ಈ ಜ್ಯೋತಿಯನ್ನು ನೇರವಾಗಿ ಕಣ್ಣುತುಂಬಿಕೊಳ್ಳಲು ವಿವಿಧ ರಾಜ್ಯಗಳ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ.41 ದಿನಗಳ ವೃತವನ್ನು ನಡೆಸಿದ ಭಕ್ತರು ಇರುಮುಡಿ ಹೊತ್ತು ಶಬರಿಮಲೆಗೆ ಹೋಗುತ್ತಾರೆ.

ಕಾಡು ಮೇಡುಗಳಲ್ಲಿ ಈ ಪ್ರಯಣ ಸುಲಭದಲ್ಲ. ಇದಾದ ಬಳಿಕ ದೇವರ ದರ್ಶನದ ಮುನ್ನ 18 ಪವಿತ್ರ ಮೆಟ್ಟಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.ಈ 18 ಮೆಟ್ಟಲುಗಳು ದೇವರ ದರ್ಶನಕ್ಕೆ ಇರುವ ಮಾರ್ಗ ಅಷ್ಟೇ ಅಲ್ಲದೆ ಧಾರ್ಮಿಕ-ಲೌಕಿಕ ಜೀವನ ಸಾರವನ್ನೂ ಹೊಂದಿದೆ.ಈ ಮೆಟ್ಟಲನ್ನು ಎಲ್ಲರೂ ಹತ್ತುವಂತಿಲ್ಲ. 41 ದಿನಗಳ ಕಠಿಣ ನಿಯಮ ಪಾಲಿಸಿದವರು ಮಾತ್ರ ಈ ಮೆಟ್ಟಿಲು ಹತ್ತಲು ಅರ್ಹರಾಗಿದ್ದು,ಆ ದೈವಿಕ ಅನುಭವ ಪಡೆಯುತ್ತಾರೆ.

18 ಪವಿತ್ರ ಮೆಟ್ಟಿಲುಗಳ ಸಂಕೇತ
ಮೊದಲು ಐದು ಮೆಟ್ಟಿಲುಗಳು ಪಂಚೇಂದ್ರಿಯಗಳು ಎಂದು ಕರೆಯಲಾಗುತ್ತದೆ. ಅವು ದೃಷ್ಟಿ,ಶಬ್ದ,ವಾಸನೆ,ರುಚಿ ಮತ್ತು ಸ್ಪರ್ಶದ ಐದು ಮಾನವ ಇಂದ್ರಿಯಗಳನ್ನು ಸಂಕೇತಿಸುತ್ತವೆ.ಮುಂದೆ ಅಷ್ಟರಾಗಗಳು ಅಂದರೆ ಎಂಟು ಮೆಟ್ಟಿಲುಗಳು ಭಾವನೆಗಳನ್ನು ಸೂಚಿಸುತ್ತವೆ ಕಾಮ,ಕ್ರೋಧ,ಲೋಭ,ಮೋಹ,ಅಸೂಯೆ,ಮದ,ಮಸ್ಸರ ಸಂಕೇತಿಸುತ್ತದೆ. ಮೆಟ್ಟಿಲುಗಳನ್ನು ಹತ್ತುವಾಗ ಜಪ ಮಾಡುವುದು ಜಗತ್ತಿನಲ್ಲಿ ನೋವನ್ನು ಉಂಟುಮಾಡುವ ಭಾವನೆಗಳನ್ನು ನಿಯಂತ್ರಿಸಲು ಹತ್ತುವಾಗ ಜಪ ಮಾಡುವುದು ಜಗತ್ತಿನಲ್ಲಿ ನೋವನ್ನುಂಟುಮಾಡುವ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮುಂದಿನ ಮೂರು ಮೆಟ್ಟಿಲುಗಳು ಸತ್ವ(ಒಳ್ಳೆಯತನ ಅಥವಾ ಶುದ್ಧತೆ) ರಜಸ್ (ಉತ್ಸಾಹ) ಮತ್ತು ತಮಸ್(ಜಡತ್ವ ಅಥವಾ ಮಂದತನ) ಎಂಬ ಮೂರು ಮಾನವ ಗುಣಗಳನ್ನು ಪ್ರತಿನಿಧಿಸುತ್ತದೆ.

ಕೊನೆಯ ಎರಡು ಹಂತಗಳು ವಿದ್ಯಾ ಜ್ಞಾನ ಮತ್ತು ಅದರ ವಿರುದ್ದವಾದ ಅವಿದ್ಯೆಯನ್ನು ಅಜ್ಞಾನವನ್ನು ಪ್ರತಿನಿಧಿಸುತ್ತದೆ.ಪಂಚಲೋಹದ ನಿರ್ಮಾಣವಾಗಿರುವ ಮೆಟ್ಟಿಲುಗಳು ಮೂಲತಃ ಕಲ್ಲಿನಿಂದ ಚಿನ್ನ,ಬೆಳ್ಳಿ,ತಾಮ್ರ,ಕಬ್ಬಿಣ ಮತ್ತು ತವರದ ವಿಶೇಷ ಮಿಶ್ರಣವಾದ ಪಂಚಲೋಹದಿಂದ ಮುಚ್ಚಲಾಗಿದೆ.

ಈ ಮೆಟ್ಟಿಲುಗಳು ಅಯ್ಯಪ್ಪನ ಮತ್ತೊಂದು ಶಕ್ತಿ ಸಂಕೇತ ಎಂದು ನಂಬಲಾಗಿದೆ. ಅಯ್ಯಪ್ಪ 18 ಆಯುಧಗಳ ಬಳಕೆಯಲ್ಲಿ ನುರಿತಿದ್ದರು.ಅವರು ಇಲ್ಲಿ ಬಂದು ನೆಲೆಸುವಾಗ ಪ್ರತಿಯೊಂದು ಆಯುಧಗಳನ್ನು ಪ್ರತಿ ಮೆಟ್ಟಿಲಲ್ಲಿ ಸಮರ್ಪಿಸಿ ಕೊನೆಯ ಹದಿನೆಂಟನೇ ಮೆಟ್ಟಿಲಲ್ಲಿ ಶರಣಾಗಿದ್ದಾರೆ ಎಂದು ನಂಬಲಾಗಿದೆ.

RELATED ARTICLES

Related Articles

TRENDING ARTICLES