Thursday, October 31, 2024

ಉಷ್ಟ್ರಪಕ್ಷಿಯಿಂದ ಗಾಬರಿಗೊಂಡ ಜನತೆ..!

ಆಸ್ಟ್ರಿಚ್​ ಪಕ್ಷಿ ಇದನ್ನ ನಾವು ಕನ್ನಡದಲ್ಲಿ ಉಷ್ಟ್ರಪಕ್ಷಿ ಎಂದು ಕರೆಯುತ್ತೇವೆ. ಸಾಧಾರಣವಾಗಿ ಭಾರತ ಸೇರಿದ ಹಾಗೆ ಹೆಚ್ಚಿನ ದೇಶಗಳ ಜನರಿಗೆ ಇದರ ಬಗ್ಗೆ ತಿಳಿದಿರೋದಿಲ್ಲ ಆದ್ರೆ ನಮ್ಮ ಶಾಲಾ ದಿನಗಳಲ್ಲಿ ಸಮಾಜ ವಿಜ್ಞಾನದಲ್ಲೋ ಅಥವಾ ಜೀವಶಾಸ್ತ್ರ ವಿಷಯದಲ್ಲೋ ಈ ಪಕ್ಷಿಯ ಬಗ್ಗೆ ಒಮ್ಮೆಯಾದ್ರು ಓದಿರ್ತೀವಿ. ಆದ್ರೆ ಆ ಪಠ್ಯಗಳು ಕೇವಲ ಪರೀಕ್ಷೆಗೆ ಸೀಮಿತವಾಗಿರೋದ್ರಿಂದ, ಇಂದಿನ ಆಧುನಿಕ ಬದುಕಿನಿಂದ ಹಾಗು ಪ್ರಕೃತಿಯ ಬಗ್ಗೆ ಮಾಹಿತಿ ಸಂಗ್ರಹದ ಕೊರತೆಯಿಂದ, ಅದೆಷ್ಟೋ ಜನರ ಸ್ಮೃತಿಪಲ್ಲಟದಲ್ಲಿ ಈ ಪಕ್ಷಿ ಮರೆಯಾಗಿದೆ. ಆದ್ರೆ, ಇದರ ಅಸ್ತಿತ್ವ ಇರುವ ಕೆಲವು ದೇಶಗಳಲ್ಲಿ, ಈ ಪಕ್ಷಿಗಳ ಬಗ್ಗೆ ಹಾಗು ಇದರ ಸಂತತಿಯ ಉಳಿವಿನ ಬಗ್ಗೆ ಅರಿವು ಮೂಡಿಸುತ್ತಿರೋದ್ರಿಂದ ಅವುಗಳ ಬಗ್ಗೆ ಅಲ್ಲಿನ ಜನಗಳಿಗೆ ಮಾಹಿತಿ ಇದೆ.

ಈ ಪಕ್ಷಿಗಳು ಜಗತ್ತಿನ ಅತಿ ದೊಡ್ಡ ಪಕ್ಷಿಯಾಗಿದ್ದು ಪಕ್ಷಿ ಸಂಕುಲದಲ್ಲೇ ಸಾಕಷ್ಟು ವೈವಿದ್ಯತೆಯನ್ನ ಈ ಉಷ್ಟ್ರಪಕ್ಷಿ ಹೊಂದಿದೆ. ಈ ಉಷ್ಟ್ರಪಕ್ಷಿಗಳಿಗೆ ಹಾರೊದಕ್ಕೆ ಸಾಧ್ಯವಾಗೋದಿಲ್ಲ. ಆದರೆ, ಮೊದಲ ಬಾರಿಗೆ ಈ ಪಕ್ಷಿಯನ್ನ ನೋಡಿದವರು ಇದರ ಓಟವನ್ನ ನೋಡಿದ್ರೆ ದಂಗಾಗದೆ ಇರಲಾರರು, ಈ ಉಷ್ಟ್ರಪಕ್ಷಿಗಳು ಸ್ಟ್ರುತಿನಿಫ಼ೊರ್ಮಸ್ ಅನ್ನೋ ವರ್ಗಕ್ಕೆ ಸೇರಿದ್ದು, ಇವುಗಳ ವಿಂಗಡಣೆಯಲ್ಲಿ ಕಿವಿ, ಏಮು, ರಿಯಾ, ಕಾಸೊವಾರಿ ಪ್ರಭೇದದ ಪಕ್ಷಗಳು ಕಂಡು ಬರುತ್ತವೆ. ಈ ಪಕ್ಷಿಗಳು ಹೆಚ್ಚಿನದ್ದಾಗಿ ಸೌದಿ ಅರೇಬಿಯ ಮತ್ತು ಆಫ್ರಿಕ ದೇಶಗಳ ಮರಳು ಕಾಡುಗಳಲ್ಲಿ ಕಂಡು ಬರುತ್ತವೆ. ಇದನ್ನ ಹೊರತು ಪಡಿಸಿದ್ರೆ ದಕ್ಷಿಣ ಅಮೆರಿಕ್ ಹುಲ್ಲಿಗಾವಲುಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಕೆಲವೊಂದು ರಾಷ್ಟ್ರಗಳು ಈ ಪಕ್ಷಿಗಳನ್ನ ತಮ್ಮ ದೇಶಕ್ಕೆ ಕೊಂಡೋಯ್ದು ಪೋಷಿಸುವ ಕೆಲಸವನ್ನ ಕೂಡ ಮಾಡುತ್ತವೆ. ಕೆಲವರು ಈ ಪಕ್ಷಿಗಳನ್ನ ಮಾಂಸಕ್ಕಾಗಿ ಹಾಗು ಇವುಗಳ ಪುಕ್ಕಗಳಿಗಾಗಿ ಸಾಕಾಣೆಯನ್ನ ಕೂಡ ಮಾಡುತ್ತಾರೆ.

ಹೀಗೆ ಹಲವು ವೈಶಿಷ್ಟ್ಯ ಇರುವ ಈ ಪಕ್ಷಿಗಳನ್ನ ಹಲವು ರಾಷ್ಟ್ರಗಳಲ್ಲಿ ಸಾಕಾಣೆ ಮಾಡಲಾಗುತ್ತಿದ್ದು. ಅವುಗಳಲ್ಲಿ ಚೀನಾ ಕೂಡ ಒಂದು. ಇಲ್ಲಿ ಹಲವು ರೀತಿಯ ಪಕ್ಷಿಗಳು ಹಾಗು ಪ್ರಾಣಿಗಳನ್ನ ಸಾಕಣೆ ಮಾಡೋದ್ರ ಜೊತೆಗೆ ಅವುಗಳನ್ನ ಆಹಾರವಾಗಿ ಕೂಡ ಬಳಸಲಾಗುತ್ತದೆ. ಅದರಲ್ಲೂ ಚೀನಾದ ಚೊಂಗ್​ಜುವೊ ನಗರದಲ್ಲಿ ಈ ಆಸ್ಟ್ರಿಚ್​ ಪಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು. ಈಗ ಇದರ ಸಂಖ್ಯೆಯೇ ಈ ನಗರಕ್ಕೆ ಸಮಸ್ಯೆಯಾಗಿ ಮಾರ್ಪಾಡಾದ ಹಾಗೆ ಕಾಣಿಸುತ್ತಿದೆ. ಮೊನ್ನೆ ರಾತ್ರಿಯಷ್ಟೆ  ಚೊಂಗ್​ಜುವೋ ನಗರದ ಜನರು ತಮ್ಮ ತಮ್ಮ ಕೆಲಸಗಳನ್ನ ಮುಗಿಸಿ ಮನೆಗೆ ತೆರಳುತ್ತಿದ್ದರು ಈ ವೇಳೆ ದಿಢೀರ್​ ಆಗಿ  80ಕ್ಕೂ ಹೆಚ್ಚು ಉಷ್ಟ್ರಪಕ್ಷಿಗಳ ಹಿಂಡು ಬೀದಿಯಲ್ಲಿ ಓಡಿವೆ ಇದರಿಂದ ಕೆಲ ನಿಮಿಷಗಳ ಕಾಲ ಟ್ರ್ಯಾಫಿಕ್​ ಜಾಮ್​ ಕೂಡ ಆಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಾಧರಣವಾಗಿ ಈ ಪಕ್ಷಿಗಳು ಜನನಿ ಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ, ಹೆಚ್ಚಿನ ಹುಲ್ಲುಗಾವಲು ಪ್ರದೇಶಗಳು ಇವುಗಳ ಅವಾಸ ಸ್ಥಾನವಾಗಿದ್ದು, ಅಂತಹ ಪ್ರದೇಶಗಳ ಸುತ್ತಮುತ್ತಲೂ ವಲಸೆ ಹೋಗಿ ನೆಲೆಸುತ್ತದೆ. ಆದರೆ, ಮೊನ್ನೆ ನಡೆದ ಈ ಘಟನೆಯಿಂದ ಸಾಕಷ್ಟು ಜನ ಬೆಚ್ಚಿ ಬಿದ್ದಿದ್ದರು. ಇವುಗಳ ಓಟದಿಂದ ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಅಲ್ಲಿನ ಪೊಲೀಸರು ಹೇಳಿಕೆಯನ್ನ ನೀಡಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಅಂತ ತಿಳಿಸಿದ್ದಾರೆ.

ಸದ್ಯಕ್ಕೆ ಹೀಗೆ ಬೀದಿಗಳಲ್ಲಿ ಓಡಿದ ಉಷ್ಟ್ರಪಕ್ಷಿಗಳನ್ನ ಸೆರೆ ಹಿಡಿಯಲಾಗಿದ್ದು, ಅವುಗಳನ್ನ ಗೂಡು ಸೇರಿಸಲಾಗಿದೆ ಅಂತ ತಿಳಿದುಬಂದಿದೆ, ಅವುಗಳು ಮತ್ತೊಮ್ಮೆ ಹೀಗೆ ನಗರಗಳಲ್ಲಿ ಕಂಡು ಬರದಂತೆ ಎಚ್ಚರಿಕೆಯನ್ನ ವಹಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಹೇಳಿಕೆಯನ್ನ ನೀಡಿದ್ದಾರೆ. ಇನ್ನು ಈ ಪಕ್ಷಿಗಳು ಜನಸಂದಣಿ ಇರುವ ಪ್ರದೇಶದಲ್ಲಿ ಕಂಡು ಬಂದಿರೋದು ಇದೇನು ಮೊದಲ ಬಾರಿಗೆ ಅಲ್ಲ. ಈ ಹಿಂದೆ ಕೂಡ  ಆಫ್ರಿಕಾದ ಕೆಲ ನಗರಗಳಲ್ಲಿ ಹಾಗು ದಕ್ಷಿಣ ಅಮೆರಿಕದ ಸಿಟಿಗಳಲ್ಲಿ ಕೂಡ ಕಂಡು ಬಂದಿತ್ತು. ಹೀಗಾಗಿ ಈ ಪಕ್ಷಿಗಳು ಮತ್ತೆ ನಗರಕ್ಕೆ ಬಾರದಂತೆ ಹಲವು ಮಾರ್ಗಗಳನ್ನ ಅನುಸರಿಸಿದರು ಕೂಡ ಆಗಾಗ ಈ ಪಕ್ಷಿಗಳು ರಸ್ತೆಗಳಲ್ಲಿ ಕಂಡು ಬರುವ ವರದಿಗಳು ಕೂಡ ಬಂದಿವೆ.

ಒಟ್ಟಾರೆಯಾಗಿ ಜನರು ಉಷ್ಟ್ರಪಕ್ಷಿಗಳ ಹಿಂಡನ್ನ ರಸ್ತೆಯಲ್ಲಿ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಚೀನಾದ ಅರಣ್ಯ ಇಲಾಖೆ ಹಾಗು ಪ್ರಾಣಿ ಸಾಕಣೆ ಸಂಘಟನೆಗಳ ಮೇಲೆ ನೆಟಿಜನ್ಸ್​ ಹಾಗು ಪ್ರಾಣಿ ಪ್ರಿಯರು ಆಕ್ರೋಶವನ್ನ  ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಚೀನಿ ಸರ್ಕಾರ ಈ ಪಕ್ಷಿಗಳ ನಗರ ವಲಸೆಯನ್ನ ತಡೆಯೋದಕ್ಕೆ  ಹಲವಾರು ಕ್ರಮಗಳನ್ನ ತೆಗೆದುಕೊಂಡಿರುವುದಾಗಿ ಹೇಳಿದೆ.

ಲಿಖಿತ್​​ ರೈ , ಪವರ್​ ಟಿವಿ

RELATED ARTICLES

Related Articles

TRENDING ARTICLES