ಹಾಸನ : ಇಂದು ವೈಕುಂಠ ಏಕಾದಶಿ ನನ್ನನ್ನು ಸೇರಿದಂತೆ ಎಲ್ಲಾ ಜನ ಪ್ರತಿನಿಧಿಗಳಿಗೆ ದೇವರು ಸದ್ಬುದ್ದಿ ಕೊಡಲಿ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಮಾಧ್ಯಮದ ಜೊತೆ ಮಾತನಾಡಿ, ಕೋವಿಡ್ 19 ಸಂದರ್ಭದಲ್ಲಿ ಎಲ್ಲರೂ ಅವರವರ ಹಿತಿ-ಮಿತಿಯಲ್ಲಿರಬೇಕೆಂದು ಹೇಳಿದ್ದಾರೆ.
ರಾಜಕೀಯ ಪಕ್ಷವೂ ಸೇರಿದಂತೆ ಎಲ್ಲರಿಗೂ ಸಾರ್ವಜನಿಕರು ಕೇಳಿಕೊಳ್ಳುತ್ತಾ ಇರುವುದು ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ಎಲ್ಲರೂ ಸೂಕ್ಷ್ಮವಾಗಿರಬೇಕು.ನಾನಂತೂ ಆರೋಗ್ಯವಾಗಿರಲು ಎಲ್ಲಾ ರೀತಿಯ ಕ್ರಮಗಳನ್ನು ಪಾಲನೆ ಮಾಡ್ತಾ ಇದ್ದೀನಿ. ಹಾಗೆಯೇ ಭಾರತೀಯ ಜನತಾ ಪಾರ್ಟಿಯೂ ಪಾಲನೆ ಮಾಡ್ತಾ ಇರೋದನ್ನ ರಾಜ್ಯದ ಎಲ್ಲಾ ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಜನ ಪಾದಯಾತ್ರೆ ಮಾಡಿದರೆ ಮಾತ್ರ ಮತ ಹಾಕ್ತಾರೆ ಅನ್ಕೊಂಡಿದ್ದರೇ ಅದು ತಪ್ಪು ಕಲ್ಪನೆ. ಮುಂದೆ ಯಾರು ಮತ ಹಾಕದೇ ಇರೋ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಆದ್ದರಿಂದ ಅವರ ಒಳಿತಿಗಾಗಿ, ಅವರ ಪಕ್ಷದ ಒಳಿತಿಗಾಗಿ, ಮತ್ತು ಸಾರ್ವಜನಿಕರ ಹಾಗೂ ಕೋರ್ಟ್ನ ಆದೇಶಕ್ಕೆ ಗೌರವ ಕೊಟ್ಟು ಸರ್ಕಾರದ ಆದೇಶ ಪಾಲನೆ ಮಾಡಬೇಕಾದ ಸದ್ಬುದ್ದಿ ಭಗವಂತ ಅವರಿಗೆ ಕೊಡಲಿ ಎಂದರು.
ಅಲ್ಲದೇ, ಇಂದು ವೈಕುಂಠ ಏಕಾದಶಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.ರಾಜ್ಯದ ಜನರಿಗೆ ಒಳಿತಾಗುವಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಎಂದು ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಲಿ ಅಂತಾ ದೇವರಲ್ಲಿ ಕೇಳುತ್ತೇನೆಂದು ಹಾಸನ ನಗರ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಪ್ರತಿಕ್ರಿಯಿಸಿದ್ದಾರೆ.