ರಾಮನಗರ : ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬೇಕು ಎಂದು ಹಮ್ಮಿಕೊಂಡಿರುವ ಪಾದಯಾತ್ರೆ 5ನೇ ದಿನಕ್ಕೆ ಕಾಲಿಟ್ಟಿದೆ. ಕೋವಿಡ್ ನಿಯಮಗಳನ್ನ ಸಂಪೂರ್ಣ ಗಾಳಿಗೆ ತೂರಿ ಪಾದಯಾತ್ರೆ ಮುಂದುವರಿಸಿರುವ ಕಾಂಗ್ರೆಸ್ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಮೂರನೇ ಬಾರಿಗೆ ಕೇಸ್ ಬಿದ್ದಿದೆ. ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಭಂಡ ಧೈರ್ಯದಿಂದ ಪಾದಯಾತ್ರೆ ಮುಂದುವರೆಸಿದೆ.
ಇಂದು ಮಾಯಗಾನಹಳ್ಳಿಯಿಂದ ಶುರುವಾಗಿ ಬಿಡದಿ ಟೌನ್ರವರೆಗೂ ಮುಂದುವರೆಯಲಿದೆ. ಅಲ್ಲದೇ ಇಂದು ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ .
ಅಲ್ಲದೇ ಕರೋನ ಬೆಂಗಳೂರಿನಲ್ಲಿ ಹೆಚ್ಚಾಗಿದೆ.ರಾಮನಗರದಲ್ಲಿ ಅಲ್ಲ. ಮೊದಲ ದಿನದಿಂದ ಪಾದಯಾತ್ರೆ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಲಿದೆ.ಆದ್ರೆ, ನಾಲ್ಕು ದಿನವೂ ಯಶಸ್ವಿಯಾಗಿ ಪಾದಯಾತ್ರೆ ಮಾಡಿದ್ದೇವೆ. ಇವತ್ತು ಪಾದಯಾತ್ರೆ ಮಾಡೇ ಮಾಡ್ತೀವಿ ಅಂತ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಮಾಡಿತ್ತಿರುವ ಪಾದಯಾತ್ರೆಯನ್ನು ತಡೆಯಲು 3 ಸಾವಿರಕ್ಕೂ ಹೆಚ್ಚು ಪೋಲಿಸರಿಂದ ಭರ್ಜರಿ ಸಿದ್ದತೆಯಾಗಿದ್ದು, ಪೋಲಿಸರ ಮಾತಿಗೆ ಬಗ್ಗದೆ ಇದ್ದಾಗ ಕಾರ್ಯಕರ್ತರನ್ನು ಬಂಧಿಸಲು ಸಹ ಏರ್ಪಡಾಗಿದೆ.
ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಪಾದಯಾತ್ರೆ ನಿಲ್ಲಿಸಲು ಈಗಾಗಲೇಎಸ್ಪಿ ಗಿರೀಶ್ ಅವರಿಂದ ನೋಟೀಸ್ ಜಾರಿ ಮಾಡಿದ್ದಾರೆ. ಆದರೂ ಕಾಂಗ್ರೆಸ್ ನಾಯಕರೂ ಅವರ ಬೆದರಿಕೆಗೆ ಬಗ್ಗದೇ ಪಾದಯಾತ್ರೆಗೆ ಇಂದಿನ ದಿನದ ಪಾದಯಾತ್ರೆಯನ್ನು ಮಾಡೇ ಮಾಡುತ್ತೀವಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.