ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊವಿಡ್ ದೃಢವಾಗಿದ್ದು, ಅವರ ಜೊತೆಗೆ ನಿರಂತರವಾಗಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಸಹ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿದ್ದರು.
ಈ ಕಾರಣದಿಂದ ಅವರೂ ಕೊವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆದರೆ, ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತನಾದ್ದರಿಂದ ನಾನು ಎರಡು ದಿನಗಳ ಕಾಲ ಸ್ವಯಂ ಪ್ರೇರಿತನಾಗಿ ಐಸೋಲೇಶನ್ಗೆ ಒಳಪಡುತ್ತಿದ್ದೇನೆ.
Since I happen to be a primary contact of CM @BSBommai who tested positive for Covid-19 today, I am voluntarily undergoing self-isolation for next two days. The Abott ID NOW test done today evening has come negative and I will undergo RT-PCR test again after two days.
1/3
— Dr Sudhakar K (@mla_sudhakar) January 10, 2022
2 ದಿನಗಳ ನಂತರ RT-PCR ಪರೀಕ್ಷೆಗೆ ಒಳಪಡಲಿದ್ದೇನೆ’. ‘ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ, ಇತರರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನೈತಿಕ ಜವಾಬ್ದಾರಿ ಹೊತ್ತು ಮುಂದಿನ ಎರಡು ದಿನಗಳ ಕಾಲ ನಾನು ಪ್ರತ್ಯೇಕವಾಗಿರಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.