ಬೆಂಗಳೂರು: ಇದೀಗ ಎಲ್ಲಿ ನೋಡಿದರೂ ಕೊರೋನ 3ನೆಯ ಅಲೆಯದೇ ಸುದ್ದಿ. ಅದರಲ್ಲೂ ವಿಕೆಂಡ್ ಕರ್ಫ್ಯೂ ಉಲ್ಲಂಘಿಸಿ ಎಲ್ಲೆಂದರಲ್ಲಿ ಜಾತ್ರೆಗಳು, ಮೇಕೆದಾಟು ಹೋರಾಟ ಹೀಗೆ ಎಲ್ಲೆಂದರಲ್ಲಿ ಜನ ಗುಂಪು ಸೇರುತ್ತಿದ್ದಾರೆ. ಅವರಲ್ಲಿ ಯಾರಿಗೆ ಕೊರೋನ ಬಂದಿದೆಯೋ ಇಲ್ಲವೊ ಗೊತ್ತಿಲ್ಲ, ಆದರೆ ಅತ್ಯಂತ ಎಚ್ಚರಿಕೆಯಿಂದ ಸರ್ಪಕಾವಲಿನಲ್ಲಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ಭದ್ರತೆಯನ್ನು ಕೊರೋನ ಭೇದಿಸಿದೆ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಟ್ವಿಟ್ ಮಾಡಿ ಧೃಡಪಡಿಸಿದ್ದಾರೆ.
ತಮಗೆ ಕೊರೋನ ಬಂದಿದ್ದು ಇದೀಗ ಕ್ವಾರಿಂಟೀನ್ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವವರೆಲ್ಲ ಕೊರೋನ ಟೆಸ್ಟ್ ಮಾಡಿಸಿಕೊಳ್ಳಿ ಹಾಗೂ ಕ್ವಾರಿಂಟೈನ್ ಆಗಿ ಎಂದು ಹೇಳಿದ್ದಾರೆ. ಹಾಗಾದರೆ ಈಗ ಎಷ್ಟು ಸಾವಿರ ಜನ ಟೆಸ್ಟ್ ಹಾಗೂ ಕ್ವಾರಿಂಟೈನ್ ಆಗಬೇಕು ಎಂಬುದು ಬಹುದೊಡ್ಡ ಪ್ರಶ್ನೆ. ಏಕೆಂದರೆ ಸಿಎಂ ಇಂದು ಚಂಪಾರವರ ಅಂತ್ಯಕ್ರಿಯೆಯಲ್ಲಿ ಹಾಗೂ ಬೂಸ್ಟರ್ ಡೋಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು!