ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 12ರಂದು ತಮಿಳುನಾಡಿನಲ್ಲಿ 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಿಸಿದೆ. ಆದರೆ ಈ ಉದ್ಘಾಟನೆಯನ್ನು ಮೋದಿಯವರು ತಮಿಳುನಾಡಿಗೆ ಬಂದು ಮಾಡುವುದಿಲ್ಲ. ಬದಲಾಗಿ ಜನವರಿ 12ರಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗಿದೆ.
ತಮಿಳುನಾಡಿನಲ್ಲಿ ಉದ್ಘಾಟನೆಯಾಗಲಿರುವ ಈ 11 ಸರ್ಕಾರಿ ಮೆಡಿಕಲ್ ಕಾಲೇಜುಗಳ ಒಟ್ಟು ವೆಚ್ಚ 4000 ಕೋಟಿಯಾಗಿದ್ದು, ಇದರಲ್ಲಿ 2145 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಭರಿಸಿದ್ದು, ಉಳಿದ ಮೊತ್ತವನ್ನು ತಮಿಳುನಾಡು ಸರ್ಕಾರ ಭರಿಸಿದೆ. ವಿರುಧಾನಗರ್, ನಮಕ್ಕಲ್, ನಿಲ್ಗಿರೀಸ್, ತಿರುಪ್ಪುರ್, ತಿರುವಲ್ಲೂರ್, ದಿಂಡಿಗುಲ್, ಕಲ್ಲಾಕುರಿಚ್ಚಿ, ಅರಿಯಲೂರ್, ರಾಮನಂತಪುರಮ್ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಈ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಉದ್ಘಾಟನೆಯಾಗಲಿವೆ.