ಮುಂಬೈ: ಅಲಿಯಾ ಕಶ್ಯಪ್ ನೆನ್ನೆ ಮಧ್ಯರಾತ್ರಿ ತನ್ನ 21ನೆಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾಳೆ. ಬಾಲಿವುಡ್ನ ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ಮಗಳಾಗಿರುವ ಅಲಿಯಾ ಕಶ್ಯಪ್ ತನ್ನ ಹುಟ್ಟುಹಬ್ಬದ ಪಾರ್ಟಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತನ್ನ ಹಿತೈಷಿಗಳು ಹಾಗೂ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾಳೆ.
ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಈ ಪಾರ್ಟಿ ನಡೆದಿದ್ದು, ಅಲಿಯಾಳ ಕುಚುಕು ಗೆಳತಿಯಾದ ಬೋನಿಕಪೂರ್ ಮತ್ತು ಶ್ರೀದೇವಿ ಮಗಳು ಖುಷಿಕಪೂರ್ ಪಾರ್ಟಿಗೆ ಬಂದಿರಲಿಲ್ಲ. ಆದರೆ ಫೋನ್ನಿಂದಲೇ ಲೈವ್ ಕಾಲ್ ಮಾಡಿದ ಖುಷಿ ‘ಹ್ಯಾಪಿ ಬರ್ತ್ಡೆ ಮೈ ಪುಂಪ್ಕಿನ್’ ಎಂದು ವಿಶ್ ಮಾಡಿದಳಂತೆ. ಜೊತೆಗೆ ಈ ಪಾರ್ಟಿಯಲ್ಲಿ ಅಲಿಯಾ ಬಾಯ್ಫ್ರೆಂಡ್ ಶೇನ್ ಗ್ರಿಗೊರೆ ಅವಳ ಕೆನ್ನೆಗೆ ಮುತ್ತುಕೊಟ್ಟಿದ್ದು ದೊಡ್ಡ ಸುದ್ದಿಯಾಗಿದೆ.