ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಟ್ವೀಟ್ ಮೂಲಕ ನಳೀನ್ ಕುಮಾರ್ ಕಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಕೋವಿಡ್ ದೃಢಪಟ್ಟಿದ್ದು ಯಾವುದೇ ಲಕ್ಷಣವಿಲ್ಲದೆ ಆರೋಗ್ಯವಾಗಿದ್ದೇನೆ . ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಈ ಹಿಂದೆ ಸಚಿವ ಆರ್. ಅಶೋಕ್ , ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಗೆ ಸೋಂಕು ದೃಢಪಟ್ಟಿತು. ಜನವರಿ 7ರಂದು ದೆಹಲಿಯಿಂದ ವಾಪಸಾಗಿದ್ದ ಗದ್ದಿಗೌಡರ್ , ತಮ್ಮ ಬಾದಾಮಿ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ನನಗೆ ಕೋವಿಡ್ ದೃಢವಾಗಿದ್ದು, ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ.
ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— Nalinkumar Kateel (@nalinkateel) January 10, 2022