ಶಿವಮೊಗ್ಗ : ಕೋವಿಡ್ ಹೋದ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ಜನರನ್ಹು ಸೇರಿಸಿ, ಪಾದಯಾತ್ರೆ ಮಾಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೋವಿಡ್ ಹೋದಬಳಿಕ ಒಂದು ಲಕ್ಷಕ್ಕೂ ಹೆಚ್ಚು ಜನರನ್ಹು ಸೇರಿಸಿ, ಪಾದಯಾತ್ರೆ ಮಾಡಿ, ಇದಲ್ಲದೆ ಡಿ.ಕೆ. ಶಿವಕುಮಾರ್, ಕೋವಿಡ್ ಟೆಸ್ಟ್ ಮಾಡಲು ಬಂದ ಅಧಿಕಾರಿಗಳಿಗೆ ಬೈದಿದ್ದಾರೆ. ಈ ರೀತಿ ಮಾಡಿದರೆ ಯಾರಿಗೆ ಒಳ್ಳೆಯದು ನಿಮಗೆ ಬೇರೆಯವರಿಂದ ಕೋವಿಡ್ ಬರಬಾರದು, ನಿಮ್ಮ ಕಾರ್ಯಕರ್ತರು ಕೂಡ ಸೇಫ್ ಆಗಿ ಇರಬೇಕೆಂಬ ಭಾವನೆ ನಮ್ಮದು. ದಯವಿಟ್ಟು ಮೇಕೆದಾಟು ಪಾದಯಾತ್ರೆ ನಿಲ್ಲಿಸಿ.ಕೋವಿಡ್ ಇರುವ ಟೈಮಲ್ಲಿ, ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾಗಲು ಹೊರಟಿದ್ದಿರಾ,ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.