ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆಯ ಅರಸಾಳುವಿನಲ್ಲಿ ರೈಲು ನಿಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲಿ ರೈಲು ನಿಲುಗಡೆಯಿಂದ ಹೊಸನಗರ, ರಾಮಚಂದ್ರಪುರಮಠ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ಕುಂದಾಪುರ, ಬೈಂದೂರು, ಭಟ್ಕಳ, ಉಡುಪಿ, ಕೋಣಂದೂರು, ಆರಗ, ತೀರ್ಥಹಳ್ಳಿ, ಆಗುಂಬೆ, ಕೊಡಚಾದ್ರಿ, ಸಿಗಂದೂರು ಕವಲೆದುರ್ಗ ಕೋಟೆ, ಜೋಗ ಜಲಪಾತ ಇನ್ನಿತರ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಉದ್ಯೋಗಕ್ಕಾಗಿ ಹೋಗುವ ವಿದ್ಯಾವಂತ ಯುವಜನಾಂಗಕ್ಕೆ ಕಡಿಮೆ ಖರ್ಚಿನಲ್ಲಿ ಓಡಾಡಲು ಅನುಕೂಲವಾಗಲಿದೆ. ಮೈಸೂರು-ತಾಳಗುಪ್ಪ, ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲನ್ನು ನಿಲ್ಲಿಸುತ್ತಿಲ್ಲ ಎಂಬ ಆರೋಪ ಈ ಭಾಗದ ಜನರಾದ್ದಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ಹಾಗೂ ಫ್ಲಾಟ್ ಫಾರಂಗಳು ನಿರ್ಮಾಣ ಆಗಿವೆ. ಆದ್ರೂ ಇಲ್ಲಿ ರೈಲು ನಿಲುಗಡೆಯಾಗದಿದ್ದರೆ ಏನು ಪ್ರಯೋಜನ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.