Monday, November 25, 2024

ಮೋದಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಪಂಜಾಬ್: ಪ್ರಧಾನಿ ಮೋದಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾಗೆ ಬಂದಿಳಿದರು. ಅವರನ್ನು ಅಲ್ಲಿಂದ ಹೆಲಿಕ್ಯಾಪ್ಟರ್​ನಲ್ಲಿ ಕರೆದೊಯ್ಯಬೇಕಾಗಿತ್ತು. ಆದರೆ ಮಳೆ ಹಾಗೂ ಕೆಟ್ಟ ಹವಾಮಾನದ ಕಾರಣದಿಂದಾಗಿ ಅವರು 20 ನಿಮಿಷಗಳ ಕಾಲ ಕಾಯಬೇಕಾಯಿತು. ಆದರೆ ಹವಾಮಾನ ಸುಧಾರಿಸದಾದಾಗ ಅವರು ಸ್ಮಾರಕಕ್ಕೆ ರಸ್ತೆಯ ಮುಖಾಂತರ ಹೋಗುವ ನಿರ್ಧಾರ ಕೈಗೊಂಡರು. ಎರಡು ಗಂಟೆಗಳಿಗೂ ಹೆಚ್ಚು ಸಮಯವನ್ನು ಈ ರಸ್ತೆ ಪ್ರಯಾಣ ತೆಗೆದುಕೊಳ್ಳಬಹುದೆಂದು ಅಂದಾಜಿಸಿ, ಪಂಜಾಬ್​ನ ಪೊಲೀಸರ ಅಗತ್ಯ ಭದ್ರತಾ ವ್ಯವಸ್ಥೆಯ ಧೃಡೀಕರಣದ ನಂತರ ಅಲ್ಲಿಂದ ಹೊರಟರು.

ಸ್ಮಾರಕದಿಂದ ಸುಮಾರು 30 ಕಿ.ಮಿ ದೂರದಲ್ಲಿ ಪ್ರಧಾನಿ ಬೆಂಗಾವಲು ಪಡೆ ಮೇಲ್ಸೇತುವೆಯನ್ನು ತಲುಪಿದಾಗ, ಅಲ್ಲಿ ಪ್ರತಿಭಟನಾಕಾರರು ತಡೆಯೊಡ್ಡಿದ್ದರು. ಹೀಗಾಗಿ 20 ನಿಮಿಷಗಳ ಕಾಲ ಫ್ಲೈಓವರ್​ನಲ್ಲಿ ಸಿಲುಕಿದ ಮೋದಿ ಕಾರ್ಯಕ್ರಮವನ್ನು ರದ್ದುಗೊಳಿಸಿ ಅಲ್ಲಿಂದ ಹಿಂದಿರುಗಿದರು. ಗೃಹಸಚಿವಾಲಯವು ಇದಕ್ಕೆ ಪಂಜಾಬ್ ಸರಕಾರನೆ. ಕಾರಣ ಎಂದು ಆರೋಪಿಸಿದೆ.

ಏರ್​ಪೋರ್ಟ್​ಗೆ ಬಂದ ಮೋದಿ ಅಲ್ಲಿ ಪಂಜಾಬ್ ಸಿಎಂ ಅನ್ನು ಮಾತಿನಲ್ಲೇ ಕುಟುಕಿದರು. ನಾನು ಇಲ್ಲಿಂದ ಜೀವಂತವಾಗಿ ಹಿಂತಿರುಗುತ್ತಿದ್ದೇನೆ. ಅದಕ್ಕಾಗಿ ನಿಮ್ಮ ಸಿಎಂಗೆ ಧನ್ಯವಾದ ಹೇಳಿಬಿಡಿ ಎಂದು ವ್ಯಂಗ್ಯವಾಗಿ ಹೇಳಿದ ಮೋದಿ ಅಲ್ಲಿಂದ ಮರಳಿದರು. ಪಂಜಾಬ್​ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಪ್ರಧಾನಿ ಭದ್ರತೆಯಲ್ಲಿ ಅತಿ ದೊಡ್ಡ ಲೋಪವಾಗಿದೆ ಎಂದು ಬಿಜೆಪಿ ಉನ್ನತ ನಾಯಕರು ಹೇಳಿದರೆ, ಪಂಜಾಬ್ ಮುಖ್ಯಮಂತ್ರಿ ಚೆನ್ನಿ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದಿದ್ದಾರೆ.

RELATED ARTICLES

Related Articles

TRENDING ARTICLES